Monday, March 2, 2026
Homeಟಾಪ್ ನ್ಯೂಸ್ಅಫಜಲಪುರದಲ್ಲಿ ಮೇ 12 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಅಫಜಲಪುರದಲ್ಲಿ ಮೇ 12 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಅಫಜಲಪುರ:ನಾಳೆ ಸೋಮವಾರದಂದು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಸಮಾರಂಭಕ್ಕೆ ಮುಖ್ಯ ಭಾಷಣಕಾರರಾಗಿ ಶ್ರೀ ಉರಿಲಿಂಗಪೆದ್ದೀಶ್ವರ ಸಂಸ್ಥಾನ ಶಾಖಾಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಮಹಾಭಾರತ ಧಾರಾವಾಹಿಯ ಬಾಲ ನಟ ಆಯುಧ ಭಾನುಶಾಲಿ ಆಗಮಿಸುತ್ತಿದ್ದಾರೆ ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಕುಮಾರ ಕೋಳಿಗೇರಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಳಿಗ್ಗೆ 11 ಗಂಟೆಗೆ ಬೃಹತ್ ಬಹಿರಂಗ ಸಭೆ ಹಾಗೂ ಡಾ. ಅಂಬೇಡ್ಕರ್ ಅವರ ಪುತ್ಥಳಿ ಭವ್ಯ ಮೆರವಣಿಗೆ ಸಾಯಂಕಾಲ 5 ನೆರವೇರಲಿವೆ. ಸಾನಿಧ್ಯವನ್ನು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶ್ರೀ ಚನ್ನಮಲ್ಲ ಶಿವಾಚಾರ್ಯರು,ಶ್ರೀ ವೀರ ಮಹಾಂತ ಶಿವಾಚಾರ್ಯರು,ಉದ್ಘಾಟನೆಯನ್ನು ಶಾಸಕ ಎಂ.ವೈ.ಪಾಟೀಲ್, ಅಧ್ಯಕ್ಷತೆ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಜ್ಯೋತಿ ಬೆಳಗಿಸುವವರು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್,ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಪೂಜೆ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೆರವೇರಿಸಲಿದ್ದಾರೆ.ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಸಾರ್ವಜನಿಕರು, ವಿವಿಧ ರಾಜಕೀಯ ಮುಖಂಡರು, ಸಾಹಿತಿಗಳು, ಪ್ರಜ್ಞಾವಂತರು, ಯುವಕರು ಪಾಲ್ಗೊಳ್ಳುವ ಮೂಲಕ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾಂತೇಶ ಬಡದಾಳ,ಅರವಿಂದ ದೊಡ್ಮನಿ,ಮಹಾಂತೇಶ್ ಬಳೂಂಡಗಿ,ಶ್ರೀಶೈಲ ಕುಡಕಿ,ರವಿ ಗೌರ,ಶಶಿಕುಮಾರ ಆರೇಕರ್,ಶಿವು ಹೊಸ್ಮನಿ,ಮಂಜು‌ ಬಟಗೇರಿ,ಮಹೇಶ್ ದೊಡ್ಮನಿ,ದತ್ತು ಹರಿಜನ,ಮಹಾದೇವ ಬಂಕಲಗಿ,ಮಡಿವಾಳ ಕೆಳಗಿನ ಮನಿ,ಸುರೇಶ ಬಳೂಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.

ಹೆಚ್ಚಿನ ಸುದ್ದಿ