ಮುದ್ದೇಬಿಹಾಳ:
ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100ಕ್ಕೆ 100ರಷ್ಟು ಸಾಧನೆ ಮಾಡಿದ್ದು ಶಾಲೆಯ ಹೆಸರನ್ನು ರಾಜ್ಯಕ್ಕೆ ತಿಳಿಸಿಕೊಟ್ಟಿದ್ದಾರೆ. ಈ ವರ್ಷದಲ್ಲಿ ಬಂದ ಫಲಿತಾಂಶ ಹೆಚ್ಚಿಗೆಯಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಂಸ್ಥೆಯ ಅಧ್ಯಕ್ಷ ಸುಧೀರ ನಾವದಗಿ ತಿಳಿಸಿದ್ದಾರೆ.

ಪ್ರಾರ್ಥನಾ ಶಾಲೆಯ ವಿದ್ಯಾರ್ಥಿನಿ ಮೈಮುನಾ ಮುದ್ನಾಳ 625ಕ್ಕೆ 621 ಅಂಕ ಪಡೆದು ಶಾಲೆಗೆ ಪ್ರಥಮವಾಗಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ್ದಾಳೆ ಅಲ್ಲದೇ ಸಿಂಚನಾ ಜವಾಳ್ಕರ್ 609 ಅಂಕ ಪಡೆದು ಶಾಲೆ ದ್ವಿತೀಯ ಹಾಗೂ ರೋಹಿಣಿ ಸೂರ್ಯವಂಶಿ 582 ಅಂಕ ಪಡೆದು ಶಾಲೆ ತೃತೀಯ ಸ್ಥಾನ ಪಡೆದಿದ್ದಾಳೆ. ಇದರಂತೆ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಅದ್ಬುತ ಸಾಧನೆ ಮಾಡಿದ್ದು ನಮ್ಮ ಶಾಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದೆ ವೇಳೆ ಶಾಲೆಯ ಪ್ರಿನ್ಸಿಪಾಲ ವಿನೋದ ಪಟಗಾರ, ಮುಖ್ಯಶಿಕ್ಷಕಿ ದಿವ್ಯ ಹೆಬ್ಬಾರ ಸೇರಿದಂತೆ ಎಲ್ಲಾ ಶಾಲಾ ಆಡಳಿತ ಮಂಡಳಿಯವರು ಪಾಲಕರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

“ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರ ಶಾಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಾಲಾ ಆಡಳಿತ ಮಂಡಳಿಯವರಿಗೂ ಅಭಿನಂದನೆಗಳು. “
ಶ್ರೀ ಶಾಂತಗೌಡ ಪಾಟೀಲ ನಡಹಳ್ಳಿ, ಯುವ ರೈತ ಮುಖಂಡರು , ಮುದ್ದೇಬಿಹಾಳ.

