ಬೆಂಗಳೂರು ಜೂನ್ 06 :: ಸಂಭ್ರಮಾಚರಣೆಯಲ್ಲಿ ಲಕ್ಷಾಂತರ ಯುವಕ, ಯುವತಿ ಅಭಿಮಾನಿಗಳು ಬರುತ್ತಾರೆ ಎಂದು ಗೊತ್ತಿದ್ದರೂ ಸಹ ಯಾವುದೇ ಪೂರ್ವ ತಯಾರಿಯಿಲ್ಲದೆ ವಿಧಾನ ಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾ0ಗಣ ದಲ್ಲಿ ಕಾರ್ಯಕ್ರಮ ಮಾಡಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಿದ ಕಾಲ್ತುಳಿತದಿಂದ ಅಮಾಯಕ 11 ಜನರ ಸಾವಿಗೆ ಮತ್ತು 36 ಜನರು ಅಸ್ವಸ್ಥರಾಗಿದ್ದಾರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಇದಕ್ಕೆ ಯಾರು ಹೊಣೆ? ಇದನ್ನು ಯಾರು ಹೊರುತ್ತಾರೆ?
ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಬೇಡ ಎಂದು ರಾಜ್ಯ ಪೊಲೀಸ್ ಇಲಾಖೆ ಹೇಳಿದ್ದರೂ ಸಹ, ರಾಜ್ಯ ಸರ್ಕಾರದ ಹಠಮಾರಿತನ ಮತ್ತು ಹುಚ್ಚು ಪ್ರಚಾರದಿಂದ ಯಾವುದೇ ಮುಂಜಾಗೃತ ಕ್ರಮವಿಲ್ಲದೆ ಎರಡು ಕಡೆಗಳಲ್ಲಿ ಆಯೋಜನೆ ಮಾಡಿರುವುದರಿಂದ ಹಾಗೂ ರಾಜ್ಯ ಪೊಲೀಸ್ ಭದ್ರತಾ ವೈಫಲ್ಯದಿಂದಾಗಿ, ತುರ್ತು ಸೇವೆಗಳು ಘಟನಾ ಸ್ಥಳದಲ್ಲಿ ಇಲ್ಲದಿರುವ ಕಾರಣ ಈ ದೊಡ್ಡ ದುರಂತ ಸಂಭವಿಸಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 40 ಸಾವಿರ ಸೀಟುಗಳದ್ದು, ಆದರೆ ಲಕ್ಷಾಂತರ ಜನ ಏಕಾಏಕಿ ಆಗಮಿಸಿದರೆ ಪರಿಸ್ಥಿತಿ ಏನಾಗಬಹುದು ಎಂಬ ಸಾಮಾನ್ಯ ಜ್ಞಾನ ಈ ಸರ್ಕಾರಕ್ಕೆ ಇಲ್ಲವೇ?
ಮಾನ್ಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ವಿವಿಧ ಸಚಿವರ, ಶಾಸಕರ, ಅಧಿಕಾರಿಗಳು ಅವರ ಕುಟುಂಬದ ಕಾರ್ಯಕ್ರಮದಂತೆ ವಿಧಾನ ಸೌಧದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆದು, ಲಾಠಿ ಚಾರ್ಜ್ ಮಾಡಿರುವ ಘಟನೆಯಿಂದ RCB ತಂಡದ ಕ್ರೀಡಾಪಟುಗಳು ಸಹ ಬೇಜಾರಾಗಿದ್ದಾರೆ. ಈ ಘಟನೆಗೆ ಯಾರು ಹೊಣೆ ಹೊರುತ್ತಾರೆ.
ಈ ರಾಜ್ಯ ಸರ್ಕಾರದ ನಿರ್ಲಕ್ಯ ಹಾಗೂ ವೈಫಲ್ಯದಿಂದಾಗಿ ಇಡೀ ದೇಶದ ಮುಂದೆ ರಾಜ್ಯವು ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಸೂತಕ ಛಾಯೆಯ ವಾತಾವರಣವನ್ನು ಈ ಸರ್ಕಾರ ನಿರ್ಮಾಣ ಮಾಡಿದೆ.
ಕೂಡಲೆ ರಾಜ್ಯ ಸರ್ಕಾರ ಮೃತ ಅಭಿಮಾನಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ನಾನು ಆಗ್ರಹಿಸುತ್ತೇನೆ.
ಈ ದುರಂತದ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ.