ದೇಶದ ಸಮಗ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ, ರಾಜ್ಯದ ಘನತವೆತ್ತ ರಾಜ್ಯಪಾಲರ ಕುರಿತು ಸಾರ್ವಜನಿಕವಾಗಿ ಸಂವಿಧಾನ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾಂಗ್ರೇಸ್ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕೆಂದು ವಿಧಾನ ಪರಿಷತ್ತಿನ ಸಭಾಪತಿಯವರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ಸಚೇತಕ ಎನ ರವಿಕುಮಾರ ಶಾಸಕರುಗಳಾದ ಟಿ ಎ ಶರವಣ, ಎಸ್ ವಿ ಸಂಕನೂರ್, ಹನುಮಂತ ನಿರಾಣಿ, ಎಂ.ಜಿ ಮೂಳೆ, ಪ್ರತಾಪ್ ಸಿಂಹ ನಾಯಕ , ಗೋವಿಂದರಾಜು , ಶಾಂತರಾಮ್ ಸಿದ್ದಿ, ಶ್ರೀ ಡಿ.ಎಸ್ ಅರುಣ್, ಕೆ.ಎಸ್ ನವೀನ, ಡಾ. ಸಾಬಣ್ಣ ತಳವಾರ್, ಡಾ.ಧನಂಜಯ್ ಸರ್ಜಿ ಉಪಸ್ಥಿತರಿದ್ದರು.