Monday, October 6, 2025
Homeರಾಜ್ಯಒಳಚರಂಡಿ ಚೇಂಬರನಿಂದ ಕೊಳಚೆ ನೀರು ರಸ್ತೆಗೆ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಮುದ್ದೇಬಿಹಾಳ ಜನತೆ...!! ಮೂಖ ಕುರುಡರಾದ...

ಒಳಚರಂಡಿ ಚೇಂಬರನಿಂದ ಕೊಳಚೆ ನೀರು ರಸ್ತೆಗೆ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಮುದ್ದೇಬಿಹಾಳ ಜನತೆ…!! ಮೂಖ ಕುರುಡರಾದ ಜನಪ್ರತಿನಿದಿಗಳು…!!!

ಮುದ್ದೇಬಿಹಾಳ:

ನಗರ ಸ್ವಚ್ಛತೆಗಾಗಿ ಯು.ಜಿ.ಡಿ. ಯೋಜನೆ ಸಂಪೂರ್ಣ ವಿಫಲವಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಈಗಾಗಲೇ ಸಾರ್ವಜನಿಕರು ತಮ್ಮ ಮನೆಯ ಟಾಯ್ಲೆಟ್ ಪೈಪ್ ಕನೆಕ್ಷನ್ ಯು.ಜಿ.ಡಿ.ಗೆ ನೀಡಲಾಗಿದ್ದು ಎಲ್ಲಾ ಯುಜಿಡಿ ಚೇಂಬರ್ ಗಳು ಭರ್ತಿಯಾಗಿ ಪಟ್ಟಣದ ಮಾರುತಿ ನಗರ ಸಂಪೂರ್ಣ ಕೊಳಚೆ ಪ್ರದೇಶವಾಗಿದೆ. ಇದರ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸಾಕಷ್ಟುಬಾರಿ ಹೇಳಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ನಿವಾಸಿಗರು ದುರಿದ್ದಾರೆ.

ನಿವಾಸಿಗರಲ್ಲಿ ಆತಂಕ:

ಮಾರುತಿ ನಗರದ ಬಹುತೇಕ ರಸ್ತೆಗಳಲ್ಲಿ ಕೊಳಚೆ ನೀರು ನಿಂತ ಪರಿಣಾಮ ಇದರಿಂದ ಆರೋಗ್ಯದಲ್ಲಾಗುವ ಪರಿಣಾಮದ ಬಗ್ಗೆ ತಿಳಿದ ನಿವಾಸಿಗರು ಆತಂಕದಲ್ಲಿದ್ದಾರೆ.

ಕುಡಿಯುವ ನೀರಲ್ಲಿ ಕೊಳಚೆ ನೀರು ಮಿಶ್ರಣ:

ಯುಜಿಡಿಯಿಂದ ಹೊರಬರುತ್ತಿರುವ ಕೊಳಚೆ ನೀರು ಅಲ್ಲಲ್ಲಿ ನಿಂತ ಪರಿಣಾಮ ನಿವಾಸಿಗರು ಕೊರೆಸಿರುವ ಕೊಳವೆ ಭಾವಿಗೆ ಬಸಿದು ಕುಡಿಯುವ ನೀರಿನಲ್ಲಿ ಕೊಳಚೆ ನೀರಿನ ವಾಸೇನೆ ಬರುತ್ತಿದೆ. ಇದರಿಂದ ಮನೆಗಳಲ್ಲಿ ನಮ್ಮ ಮನೆಯ ಬೋರಿನ ನೀರು ಕುಡಿಯುವುದಕ್ಕೆ ಆಗುತ್ತಿಲ್ಲ ಎಂದು ನಿವಾಸಿಗರು ಆರೋಪಿಸಿದ್ದಾರೆ.

ಕಣ್ಣಿಗೆ ಕಾಣಿಸದ ಪುರಸಭೆ ಸದಸ್ಯರು:

ಪಟ್ಟಣದ ೧ನೇ ವಾರ್ಡಿನ ನಿವಾಸಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ವಾರ್ಡಿನ ಪುರಸಭೆ ಸದಸ್ಯರು ಮಾತ್ರ ನಿವಾಸಿಗರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ನಿವಾಸಿಗರು ಆರೋಪಿಸಿದ್ದಾರೆ.

ನಿವಾಸಿಗರೊಂದಿಗೆ ವಾಗ್ವಾದಕ್ಕಿಳಿದ ಮುಖ್ಯಾಧಿಕಾರಿ:

ವಾರ್ಡ ನಂ.೧ ರಲ್ಲಿ ಯುಜಿಡಿ ಕಾಮಗಾರಿಯು ಇನ್ನೂ ನಡೆಯುತ್ತಿದೆ. ಆದರೂ ಇಲ್ಲಿನ ಕೆಲ ನಿವಾಸಿಗರು ಈಗಾಗಲೇ ತಮ್ಮ ಮನೆಯ ಪೈಪ್‌ಲೈನ್‌ನನ್ನು ಯುಜಿಡಿಗೆ ಜೋಡನೆ ಮಾಡಿದ್ದಾರೆ. ಇದರಿಂದ ಯುಜಿಡಿ ಚೇಂಬರಗಳು ತುಂಬಿ ಕೊಳಕು ನೀರು ಎಲ್ಲಂದರಲ್ಲಿ ನಿಲ್ಲುತ್ತಿದೆ. ಕೂಡಲೇ ಅಕ್ರಮವಾಗಿ ಜೋಡನೆ ಮಾಡಿದ ಪೈಪ್‌ಲೈನ್‌ಗಳನ್ನು ಕಟ್ ಮಾಡಿ ಜೋಡನೆ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ನಿವಾಸಿಗರಾದ ಸುರೇಶ ಕೆರಗೊಂಡ ಅವರು ಪುರಸಭೆ ಕಾರ್ಯಾಲಯಕ್ಕೆ ಬೇಟಿ ನೀಡಿ ಮುಖ್ಯಾಧಿಕಾರಿಗಳಿಗೆ ಹೇಳಲು ಮುಂದಾದಾಗ ಆಕ್ರೋಶವನ್ನು ವ್ಯಕ್ತಪಡಿಸಿದ ಮುಖ್ಯಾಧಿಕಾರಿಗಳು, ಇದಕ್ಕೆ ನಾನೇನು ಮಾಡಲು ಸಾದ್ಯ. ಈಗಾಗಲೇ ಎಲ್ಲಾ ವಾರ್ಡಗಳಲ್ಲಿ ಡಂಗೂರ ಹಾಕಿ ಯಾರೂ ಯುಜಿಡಿಗೆ ಜೋಡೆನ ಮಾಡಬೇಡಿ ಎಂದು ಹೇಳಲಾಗಿದೆ. ಆದರೂ ಕೆಲವರು ಜೋಡನೆ ಮಾಡಿದ್ದಾರೆ ಎಂದು ಹೇಳಿದಾಗ ಮರು ಮಾತನಾಡಿದ ಕೆರಗೊಂಡ, ಗಲೀಜಿನಲ್ಲಿಯೇ ನಾವು ವಾಸಿಸಲು ಹೇಗೆ ಸಾದ್ಯ ಎಂದು ಹೇಳಿದಾಗ ಮುಖ್ಯಾಧಿಕಾರಿಗಳು ನಿವೇನು ನನ್ನನ್ನು ಕೇಳಿ ಸೈಟ್ ತೆಗೆದುಕೊಂಡಿರೇನು ಎಂದು ಆಕ್ರೋಶಭರಿತ ಉತ್ತರವನ್ನು ನೀಡಿದರು. ನಂತರ ಅಲ್ಲಿದ್ದ ಕೆಲವರು ಇಬ್ಬರು ಮಾತನ್ನು ಶಾಂತಿಗೊಳಿಸಿದ ಘಟನೆ ನಡೆಯಿತು.

  • ನಮ್ಮ ವಾರ್ಡಿನಲ್ಲಿ ಯುಜಿಡಿ ಚೇಂಬರನಿಂದ ಗಲೀಜು ನೀರು ತುಂಬಿಕೊಂಡು ನಮ್ಮ ಮನೆ ಮುಂದೆ ಬಂದು ನಿಲ್ಲಿತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದೇವೆ. ಅಲ್ಲದೆ ಗಲೀಜು ನೀರು ಇಂಗಿಕೊಂಡು ನಮ್ಮ ಮನೆಯ ಬೋರಿನ ನೀರಿನಲ್ಲಿ ಮಿಶ್ರಣಗೊಂಡು ಕೊಳಕು ನೀರು ಕುಡಿಯುವುದಂತಾಗಿದೆ. ಇದರ ಬಗ್ಗೆ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದೆ ಯಾವುದೇ ಪ್ರಯೋಜನವಾಗಿಲ್ಲಾ. ಇನ್ನೂ ನಮ್ಮ ವಾರ್ಡಿನ ಪುರಸಭೆ ಸದಸ್ಯರ ಮುಖವೂ ನಾವು ನೋಡಿಲ್ಲಾ.

ಎಸ್. ಎಸ್.ಕೆರಗೊಂಡ, ನಿವೃತ್ತ ದೈಹಿಕ ಶಿಕ್ಷಕರು, ಮುದ್ದೇಬಿಹಾಳ.

ಹೆಚ್ಚಿನ ಸುದ್ದಿ