ಪರಿವರ್ತನೆಗೆ ಅಹಂಕಾರ ಬಿಡಿವುದೆ ಉತ್ತಮ ಮಾರ್ಗ
ಕಲಬುರ್ಗಿ : “ನಾನು ಮಾತ್ರ ಸರಿ, ಉಳಿದವರು ಸರಿಯಿಲ್ಲ ಎನ್ನುವ ಅಹಂಕಾರವೇ ಮನುಷ್ಯನ ವ್ಯಕ್ತಿತ್ವದ ವಿನಾಶಕ್ಕೆ ಕಾರಣ” ಎಂದು ತೊನಸನಹಳ್ಳಿ (ಎಸ್) ಅಲ್ಲಮಪ್ರಭು ಸಂಸ್ಥಾನ ಮಠದ ಪೂಜ್ಯಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಜಿಗಳು ಮಾರ್ಮಿಕವಾಗಿ ನುಡಿದರು.
ತಮ್ಮ ಕಲ್ಯಾಣ ಸಂದೇಶದಲ್ಲಿ ಜೀವನದ ದ್ವಂದ್ವಗಳ ಕುರಿತು ಜನರ ಕಲ್ಯಾಣದ ಬಗ್ಗೆ ಸಂದೇಶ ನೀಡಿದೆ ಪೂಜ್ಯರು, “ಇಂದಿನ ಕಾಲದಲ್ಲಿ ಮನುಷ್ಯರು ತಮ್ಮ ಆಲೋಚನೆಗಳನ್ನು ಪರಿವರ್ತಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ನಮ್ಮ ಅನೇಕ ಆಲೋಚನೆಗಳು ನಮ್ಮ ಸ್ವಂತ ಅನುಭವದಿಂದ ಬಂದವುಗಳಲ್ಲ, ಬದಲಾಗಿ ನಾವು ಪರರ ಆಲೋಚನೆಗಳನ್ನು ಎರವಲು ಪಡೆದು ಬದುಕುತ್ತಿದ್ದೇವೆ. ಇದರಿಂದಾಗಿ ಹೊಸ ವಿಚಾರಗಳಿಗೆ ನಮ್ಮ ಮನಸ್ಸಿನಲ್ಲಿ ಜಾಗವಿಲ್ಲದಂತಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
“ಬದುಕು ಕೇವಲ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಎಂಬ ದೂಷಣೆ ಅಥವಾ ದ್ವಂದ್ವದಲ್ಲೇ ಮುಗಿದುಹೋಗಬಾರದು. ನಾವು ನೈಜವಾಗಿ ಬದುಕಬೇಕೆಂದರೆ ನಮ್ಮ ಆಲೋಚನೆಗಳು ನಮ್ಮ ಸ್ವಂತ ಅನುಭವದ ಸಾಕ್ಷಾತ್ಕಾರವಾಗಬೇಕು. ಆಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ,” ಎಂಬುದು ಪೂಜ್ಯಶ್ರೀಗಳ ಜನರಿಗೆ ಸಂದೇಶದ ನೀಡಿದ್ದಾರೆ.
