Thursday, June 25, 2026
Homeಕ್ರೀಡೆಕಾರ ಹುಣ್ಣಿಮೆ ಪ್ರಯುಕ್ತ 2 ಹಲ್ಲಿನ ಹೋರಿಗಳ ಪ್ರದರ್ಶನ...!!!

ಕಾರ ಹುಣ್ಣಿಮೆ ಪ್ರಯುಕ್ತ 2 ಹಲ್ಲಿನ ಹೋರಿಗಳ ಪ್ರದರ್ಶನ…!!!

ಮುದ್ದೇಬಿಹಾಳ:

ತಾಲೂಕಿನ ಅರೆಮುರಾಳ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ 2 ಹಲ್ಲಿನ ಹೋರಿಗಳ ಪ್ರದರ್ಶನವನ್ನು ಜೂನ್ 27ರಂದು (ಶನಿವಾರ) ಆಯೋಜಿಸಲಾಗಿದೆ ಎಂದು ಗ್ರಾಮದ ಗುರುಹಿರಿಯರು ತಿಳಿಸಿದ್ದಾರೆ.ಕಾರ್ಯಕ್ರಮವು ಬೆಳಿಗ್ಗೆ 11:30 ಗಂಟೆಗೆ ಗ್ರಾಮದ ಕನ್ನಡ ಶಾಲಾ ಆವರಣದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಥಮ ಬಹುಮಾನವಾಗಿ ₹5,001 ಹಾಗೂ ದ್ವಿತೀಯ ಬಹುಮಾನವಾಗಿ ₹2,001 ನಗದು ಬಹುಮಾನ ನೀಡಲಾಗುವುದು.ಹೋರಿ ಮಾಲೀಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 8431426882, 7022081344 ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಸುದ್ದಿ