Monday, July 7, 2025
HomeUncategorizedಕುಷ್ಠಗಿ: ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯದಿಂದ ಮುಕ್ತಗೊಳಿಸಲು ಒತ್ತಾ ತಹಶಿಲ್ದಾರಿಗೆ ಮನವಿ

ಕುಷ್ಠಗಿ: ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯದಿಂದ ಮುಕ್ತಗೊಳಿಸಲು ಒತ್ತಾ ತಹಶಿಲ್ದಾರಿಗೆ ಮನವಿ

ಕುಷ್ಟಗಿ: ಶಿಕ್ಷಕರನ್ನು ಬಿ.ಎಲ್.ಒ. ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.ತಹಶೀಲ್ದಾರ್ ಅಶೋಕ ಶಿಗ್ಗಾವಿಯವರಿಗೆ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗುನ್ನಾಳ ಮಾತನಾಡಿ, ತಾಲ್ಲೂಕಿನಲ್ಲಿ ಶೇ 60ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇನ್ನೂ ತಾಲೂಕಿನ ಶಾಲೆಗಳಲ್ಲಿ ಒಬ್ಬ ಶಿಕ್ಷಕರು ಇಲ್ಲವಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶೇ 40ರಷ್ಟು ಶಿಕ್ಷಕರು ಭೋದನೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ಕಷ್ಟವಾಗಿದೆ ಎಂದರು.ಶಾಲೆಯಲ್ಲಿ ಮಕ್ಕಳ ದಾಖಲಾತಿ, ಕ್ರೀಡಾಕೂಟ, ಪ್ರತಿಭಾ ಕಾರಂಜಿ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಒಂದು ತಿಂಗಳ ಕಾಲ ಮತದಾರರ ಪಟ್ಟಿ ತಯಾರಿಕೆ, ಮತ್ತು ಮನೆ ಮನೆಗೆ ಬೇಟಿ ಕರ್ತವ್ಯದಲ್ಲಿ ಶಿಕ್ಷಕರು ತೊಡಗಿಕೊಂಡಾಗ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಯಲ್ಲನಗೌಡ ಪಾಟೀಲಶಿಕ್ಷಕರನ್ನು ಬಿ.ಎಲ್‌.ಒ. ಕರ್ತವ್ಯಕ್ಕೆ ನಿಯೋಜಿಸಬಾರದೆಂದು 2018ರಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಹೇಳಿಕೆಯನ್ನು ಮನಗಂಡು, ಸರ್ಕಾರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಲಕ್ಷ್ಮಣ ಪೂಜಾರ.ಗೌರವಾಧ್ಯಕ್ಷರು. ಸಿದ್ದರಾಮಪ್ಪ ಅಮರಾವತಿ ಜಿಲ್ಲಾ ಕಾರ್ಯಕಾರಿಣಿಯ ಸಮಿತಿ ಸದಸ್ಯರು.ಮಂಜಪ್ಪ ಪೂಜಾರ.ಮಲ್ಲಪ್ಪ ಕುದರಿ.ಹೈದರ್ ಅಲಿ ಜಾಲಿಹಾಳ. ರುದ್ರೇಶ ಬೂದಿಹಾಳ.ಯಮನಪ್ಪ ಲಮಾಣಿ.ಶ್ರೀಮತಿ ವಿದ್ಯಾ ಕಂಪಾಪುರ್ ಮಠ ಸೋಮಲಿಂಗಪ್ಪ ಗುರಿಕಾರ.ಬಸಟೆಪ್ಪ ಸೀಳ್ಳಿನ ತಾಲೂಕಿನ ಅನೇಕ ಶಿಕ್ಷಕರು ಇದ್ದರು

ವರದಿ :ಯಮನೂರಪ್ಪ ಆರ್ ಅಬ್ಬಿಗೇರಿ

ಹೆಚ್ಚಿನ ಸುದ್ದಿ