Tuesday, October 7, 2025
Homeಜಿಲ್ಲಾ ಸುದ್ದಿಗಳುಕೆ.ಆರ್.ಐ.ಡಿ.ಎಲ್. ರಸ್ತೆ ಪ್ಯಾಚ್ ವರ್ಕ್ ನಿಲ್ಲಿಸಿದ ಸಾರ್ವಜನಿಕರು..!

ಕೆ.ಆರ್.ಐ.ಡಿ.ಎಲ್. ರಸ್ತೆ ಪ್ಯಾಚ್ ವರ್ಕ್ ನಿಲ್ಲಿಸಿದ ಸಾರ್ವಜನಿಕರು..!

ಮುದ್ದೇಬಿಹಾಳ 16:

ಕೆ.ಆರ್.ಐ.ಡಿ.ಎಲ್. ರಸ್ತೆ ನಿರ್ವಹಣೆಗಾರರಿಗೆ ತಿಳಿಸಿದಾಗ ಕಾಟಾಚಾರಕ್ಕಾಗಿ ಮಾಡುತ್ತಿದ್ದ ರಸ್ತೆಯ ಪ್ಯಾಚ್ ವರ್ಕ್ ನಿಲ್ಲಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಪಟ್ಟಣದ ಹುಡ್ಕೋದ ಶ್ರೀ ಕಿತ್ತೂರರಾಣಿ ಚನ್ನಮ್ಮಾಜಿ ದ್ವಾರದ ಎದುರಿಗೆ ಮಳೆಯಿಂದ ರಸ್ತೆಯು ಸಂಪೂರ್ಣ ಹಾಳಾಗಿ ವಾಹನ ಸಂಚಾರರಿಗೆ ತೊಂದರೆಯಾಗುತ್ತಿತ್ತು. ಇದಕ್ಕಾಗಿ ರಸ್ತೆ ಸರಿಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ರಸ್ತೆಯ ಪ್ಯಾಚ್ ವರ್ಕ್ ಮಾಡಲು ಬಂದ ಕಾರ್ಮಿಕರು ರಸ್ತೆಯಲಿದ್ದ ನೀರನ್ನು ಸ್ವಚ್ಛಗೊಳಿಸದೇ ನೀರಿನಲ್ಲಿಯೇ ಡಾಂಬರ್ ಹಾಕಳು ಮುಂದಾದರು. ಇದನ್ನು ಗಮನಿಸಿದ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಗೂಳಿ ಹಾಗೂ ಪುರಸಭೆ ಸದಸ್ಯ ವಿರೇಶ ಹಾಡಲಗೇರಿ, ಇಲಾಖೆ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡು ಸಂಭಂದಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ವೃತ್ತದಲ್ಲಿ ಆಗಿರುವ ತೆಗ್ಗು ಗುಂಡಿಗಳನ್ನು ಸರಿಯಾಗಿ ಪ್ರಮಾಣದಲ್ಲಿ ಡಾಂಬರ್ ಹಾಕಿ ಹುಡ್ಕೋ ಹಾಗೂ ಮುಖ್ಯ ರಸ್ತೆ ಹೊಂದುವಂತೆ ರಸ್ತೆ ಸರಿಪಡಿಸಬೇಕು ಎಂದು ತಿಳಿಸಿದರು. ನಂತರ ರಸ್ತೆ ಕಾಮಗಾರಿಯನ್ನು ನಿಲ್ಲಿಸಿ ನಾಳೆ ಸಂಪೂರ್ಣನವಾಗಿ ರಸ್ತೆಯನ್ನು ಸ್ವಚ್ಛಗೊಳಿಸಿ ಸರಿಪಡಿಸುವುದಾಗಿ ಇಲಾಖೆ ಸಿಬ್ಬಂದಿಗಳು ಹೇಳಿ ಸ್ಥಳದಿಂದ ತೆರಳಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಹುಸೇನ್ ಮುಲ್ಲಾ ಕಾಳಗಿ, ಸಾಹೇಬಗೌಡ ಬಿರಾದಾರ, ಯಂಕಪ್ಪ ನಾಯಕಮಕ್ಕಳ ಇದ್ದರು.

ಹೆಚ್ಚಿನ ಸುದ್ದಿ