
ಗದಗ:ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಭಾಗವಾಗಿ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಗದಗ ಜಿಲ್ಲಾ ನಿರ್ಮಾಣ ಕೇಂದ್ರದ ಯೋಜನೆಯ ನಿರ್ದೇಶಕ ಗಂಗಾಧರ್ ಶಿರೋಳ್ ಅವರ ಮನೆ ಮೇಲೆ ದಾಳಿ ನಡೆಸಿದ್ದರು.ಈ ವೇಳೆ ಶಿರೋಳ ಅವರಿಗೆ ಸೇರಿದ ನಿವಾಸ, ಕಚೇರಿ ಹಾಗೂ ಸಂಬಂಧಿತ ವ್ಯಕ್ತಿಗಳ ಮನೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಂತರ ಮೌಲ್ಯದ ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು, ಬ್ಯಾಂಕ್ ಠೇವಣಿಗಳು ಮತ್ತು ವಾಹನಗಳ ಬಗ್ಗೆ ಮಹತ್ವದ ದಾಖಲೆಗಳು ಇವೆ.ದಾಳಿಯ ಪೂರ್ವತಯಾರಿ ಹಾಗೂ ಸ್ಥಳಗಳು ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಹಲವು ದಿನಗಳಿಂದ ಶಿರೋಳ ಅವರ ವಿರುದ್ಧ ಗಂಭೀರ ದೂರುಗಳನ್ನು ಆಧಾರವಿಟ್ಟು ವಿಶ್ಲೇಷಣೆ ನಡೆಸಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಇಂದು ಬೆಳಗ್ಗೆ ಬಹುಜ್ಞಾಪ್ತಿ ತಂಡಗಳನ್ನು ರಚಿಸಿ ಗದಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಳು ಮನೆಗಳು ಮತ್ತು ಕಚೇರಿಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.ಪತ್ತೆಯಾದ ವಸ್ತುಗಳು ಮತ್ತು ಆಸ್ತಿ ವಿವರಗಳ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಿಕ್ಕಿದ ಮಾಹಿತಿಗಳು ಮತ್ತು ವಸ್ತುಗಳ ವಿವರಗಳು ಈ ಕೆಳಗಿನಂತಿವೆ:307 ಗ್ರಾಂ ಚಿನ್ನಾಭರಣಗಳು, ಇದರ ಮೌಲ್ಯ 23 ಲಕ್ಷ ರೂ. ಕೆಜಿ ಬೆಳ್ಳಿ ವಸ್ತುಗಳು, ಮೌಲ್ಯ ಸುಮಾರು 3.70 ಸಾವಿರ ರೂ…ನಗದು ರೂಪದಲ್ಲಿ 21 ಲಕ್ಷ 50 ಸಾವಿರ ರೂ. ಬ್ಯಾಂಕ್ ಠೇವಣಿಗಳ ದಾಖಲೆಗಳುನಾನಾ ಮೂಲಗಳಿಂದ ಪಡೆದ ಮಾಹಿತಿ ಆಧಾರದಲ್ಲಿ ಅಂದಾಜು 3 ಕೋಟಿ 49 ಲಕ್ಷ ಮೌಲ್ಯದ ಆಸ್ತಿ ವಿವರಅಂದಾಜು 2 ಕೋಟಿ 50 ಲಕ್ಷ ರೂ. ಮೌಲ್ಯದ 4 ಸೈಟ್ ಪೇಪರ್ಗಳು, 5 ಬೇನಾಮಿ ಮನೆಗಳ ದಾಖಲೆ ಪತ್ರಗಳು ಹಾಗೂ ಈ 2 ಮನೆಗಳ ಕಾಗದಗಳುಶಿರೋಳ್ ಅವರ ಹೆಸರಿನಲ್ಲಿ ಎರಡು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ಮಾಹಿತಿಯೂ ಕೂಡ ಇದ್ದಾರೆ ಶಂಕಿತ ಬೇನಾಮಿ ಆಸ್ತಿಗಳ ತನಿಖೆ ಮುಂದುವರಿಕೆದಾಳಿಯಲ್ಲಿ ಪತ್ತೆಯಾದ 5 ಮನೆಗಳು ಬೇನಾಮಿಯಾಗಿ ನೊಂದಾಯಿತ್ತಾಗುವ ಶಂಕೆಯಿದ್ದು, ಈ ಕುರಿತು ಇನ್ನಷ್ಟು ಗಂಭೀರವಾಗಿದೆ. ಸ್ಥಳೀಯ ದಾಖಲೆ ಕಚೇರಿಗಳು, ನೊಂದಣಿ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಆಸ್ತಿಗಳ ಮೂಲ ಮತ್ತು ಮಾಲೀಕತ್ವವನ್ನು ಪರಿಶೀಲಿಸಲಾಗಿದೆ ಗಂಗಾಧರ್ ಶಿರೋಳ್ ಅವರ ವಿರುದ್ಧ ಭ್ರಷ್ಟಾಚಾರದ ಅಂಶಗಳು ಬಹಿರಂಗವಾಗುತ್ತಿದ್ದವು, ಅವರಿಗೆ ಸೇರಿದ ಆಸ್ತಿಗಳ ಪ್ರಮಾಣ ಅಧಿಕೃತ, ವೃತ್ತಿಪರ ಆದಾಯಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ನಿರ್ಧಾರವಾಗಿದೆ. ದಾಳಿ ನಂತರವೂ ದಾಖಲೆ ಪರಿಶೀಲನೆ ಹಾಗೂ ವಿಚಾರಣೆ ಪ್ರಕ್ರಿಯೆ ತೀವ್ರಗೊಳ್ಳಲಿದೆ, ಶಿರೋಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ ಇದೆ.ಲೋಕಾಯುಕ್ತ ಪೊಲೀಸರು ಈ ದಾಳಿಯಿಂದ ಶಿರೋಳ್ ಅವರ ವಿರುದ್ಧ ಭ್ರಷ್ಟಾಚಾರದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಾರ್ವಜನಿಕ ಹಣದ ದುರ್ಬಳಕೆ, ಅಧಿಕಾರ ದುರುಪಯೋಗ ಮತ್ತು ಬಂಡವಾಳ ಸುಲಭವಾಗಿ ಗಳಿಸಿರುವ ಆರೋಪಗಳ ಮೇಲೆ ಈಗ ಸೈದ್ಧಾಂತಿಕ ಹಾಗೂ ಕಾನೂನು ಹೋರಾಟ ನಡೆಯುವ ಸಾಧ್ಯತೆ ಇದೆ.
ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ
