Monday, July 7, 2025
Homeಜಿಲ್ಲಾ ಸುದ್ದಿಗಳುಜೇನುಕುರುಗೆ ಪೂರ್ವಜರ ಸ್ಥಳ ವಾಸಿಸಲು ಅವಕಾಶ ನೀಡದ ಅರಣ್ಯ ಇಲಾಖೆ :: 6 ಗುಡಿಸಲು ತೆರವು

ಜೇನುಕುರುಗೆ ಪೂರ್ವಜರ ಸ್ಥಳ ವಾಸಿಸಲು ಅವಕಾಶ ನೀಡದ ಅರಣ್ಯ ಇಲಾಖೆ :: 6 ಗುಡಿಸಲು ತೆರವು

ಜೇನುಕುರುಬ ಮುಖಂಡರು ಅರಣ್ಯ ಇಲಾಖೆ ಸಿಬ್ಬಂದಿ ನಡುವೇ ಮಾತಿನ ಚಕಮಕಿ

ಹುಣಸೂರು: ಜೇನುಕುಬರು ತಮ್ಮ ಪೂರ್ವಜರು ಮೂಲ ಸ್ಥಳಕ್ಕೆ ಹೋಗಿ ಹಾಕಿಕೊಂಡಿದ ಗುಡಿಸಲು ಗಳನ್ನು ಅರಣ್ಯ ಸಿಬ್ಬಂದಿ ಬಿಗಿ ಬಂದೋಬಸ್ತನಲ್ಲಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಅರಣ್ಯ ಅತಿಕ್ರಮವಾಗಿ ಪ್ರವೇಶಿಸಿಸಿ ಜೇನುಕುರುಬ ಕುಟುಂಬಗಳು 6 ಗುಡಿಸಲುಗಳ ನಿರ್ಮಿಸಿಕೊಂಡಿದ್ದಾರೆ ಎಂದು, ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ಗುಡಿಸಲು ತೆರವು ವೇಳೆ ಜೇನುಕುರುಬ ಮುಖಂಡರು, ಮಹಿಳೆಯರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅರಣ್ಯ ಅತಿಕ್ರಮ ಪ್ರವೇಶಕ್ಕೆ ಕೆಲವು ಸ್ವಯಂ ಸೇವಾ ಸಂಘಟನೆಗಳು ಬೆಂಬಲ ನೀಡಿವೆ ಎಂದು ಆರೋಪಸಿ ಅವರ ವಿರುದ್ಧವೂ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ. ಅತ್ತೂರು ಕೊಲ್ಲಿಯಲ್ಲಿ ತಮ್ಮ ಹಾಡಿ ಇತ್ತು. ಪೂರ್ವಿಕರು ಇಲ್ಲಿಯೇ ವಾಸ ಮಾಡುತ್ತಿದ್ದರೆಂದು ಪ್ರತಿಪಾದಿಸಿ ಪುನರ್ವಸತಿಗೆ ಆಗ್ರಹಿಸಿ ಜೇನು ಕುರುಬ ಕುಟುಂಬಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಈಗ ಪುನ‌ರ್ ವಸತಿ ಕಲ್ಪಿಸುವಂತೆ ಕೋರಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ದಾಖಲೆ ಇಲ್ಲ ಎಂದು ಹೇಳಿ ಇಲ್ಲಿಂದ ನಮ್ಮನ್ನು ಓಡಿಸಲು
ಪ್ರಯತ್ನಿಸುತ್ತಿದ್ದಾರೆ. ನಾವು ಬದುಕಲು ಅವಕಾಶ ನೀಡುತ್ತಿಲ್ಲ. ಮಹಿಳೆಯರು, ಪುಟ್ಟ ಮಕ್ಕಳು ಈ ವಯಸ್ಸಿನಲ್ಲಿ ಎಲ್ಲಿ ಹೋಗಬೇಕೆಂದು ಆದಿವಾಸಿ ಮುಖಂಡ ಶಿವು. ಸೀತಮ್ಮ. ಸಾವಿತ್ರಿ ಮತ್ತಿತರರು ಪ್ರಶ್ನಿಸಿ ವಾಗ್ವಾದಕ್ಕಿಳಿದರು.

ನಾಗರಹೊಳೆ ಎಸಿಎಫ್ ಅನನ್ಯ ಕುಮಾರ್, ಹುಣಸೂರು ಎಸಿಎಫ್ ಲಕ್ಷ್ಮಿಕಾಂತ್, ಸಮಜಾಯಿಷಿ ನೀಡಿದರೂ ಆದಿವಾಸಿಗಳ ಮುಖಂಡರು ಒಪ್ಪಲಿಲ್ಲ. ಕೊನೆಗೆ ಹೆಚ್ಚುವರಿಯಾಗಿ ನಿರ್ಮಿಸಿದ್ದ 6 ಟೆಂಟ್‌ಗಳ ತೆರವುಗೊಳಿಸಿದ್ದಾರೆ.

ಹೆಚ್ಚಿನ ಸುದ್ದಿ