.
ಬೆಂಗಳೂರು ಆಗಸ್ಟ್ 24; ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಪರಿಶಿಷ್ಟರ ಐಕ್ಯತೆಯ ಅಭಿನಂದನಾ ಸಮಾರಂಭವನ್ನು ಸೋಮವಾರ ಇದೇ 25ರಂದು ಲಿಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಎನ್.ಮೂರ್ತಿ,ಪರಿಶಿಷ್ಟ 101 ಜಾತಿಗಳ ಐಕ್ಯತೆಯ ಅಭಿನಂದನಾ ಸಮಾರಂಭವನ್ನು ಲಿಡ್ಕರ್ ಭವನ ಸಭಾಂಗಣದಲ್ಕಿ11-30ಕ್ಕೆ ದ.ಸಂ.ಸ ಹಾಗೂ ಆರ್.ಪಿ.ಐ ರಾಜ್ಯ ಘಟಕದಿಂದ ಹಮ್ಮಿಕೊಳ್ಳಲಾಗಿದೆ,ಕಳೆದ 35 ವರ್ಷಗಳಿಂದ ಪರಿಶಿಷ್ಟ ಮೀಸಲಾತಿ ವರ್ಗೀಕರಣಕ್ಕಾಗಿ ರಾಜ್ಯದಲ್ಲಿ ಹೋರಾಟ ನಡೆದಿದೆ. ಅಂತಿಮವಾಗಿ ಪರಿಶಿಷ್ಟರ ಮೀಸಲಾತಿ ಸಮಾಧಾನಕರವಾಗಿ ಹಂಚಿಕೆಯಾಗಿದೆ. ಮುಂದಿನ ದಿನಗಳಲ್ಲಿ ಐಕ್ಯತೆಯ ಹೋರಾಟ ಅನಿವಾರ್ಯವಾಗಿ ಹಾಗೂ ಅಗತ್ಯವಾಗಿದೆ. ದೈಯೋದ್ದೇಶ ಈಡೇರಿಕೆಗಾಗಿ ಒಗ್ಗಟ್ಟಿನ ಹೋರಾಟದ ಕಡೆ ಹೆಜ್ಜೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಈ ಐಕ್ಯತೆಯ ಮಹತ್ವ ಪೂರ್ಣ ಸಮಾರಂಭ ಐತಿಹಾಸಿಕ ಮೈಲಿಗಲ್ಲಾಗಲಿದೆ,ಈ ಸಮಾವೇಶದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಅನೇಕ ಮುಖಂಡರನ್ನು,ಈ ಚಳುವಳಿಯಲ್ಲಿ ಮಡಿದ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ಒಂದು ವರ್ಷಕಾಲ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ದ.ಸಂ.ಸ ಹಾಗೂ ಅಂದು “ಪರಿಶಿಷ್ಟ ಜಾತಿಗಳ ಐಕ್ಯತೆಯ ಜಾಗೃತಿ” ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಆರ್ ಪಿ ಐ ನಡೆಸಲು ಉದ್ದೇಶಿಸಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಪರಿಶಿಷ್ಟ ಜಾತಿಯವರು ಹಾಗೂ ಸಮಾನ ಮನಸ್ಕರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 5ಲಕ್ಷ 22,099 ಜನ ಸಂಖ್ಯೆಯುಳ್ಳ ಅಲೆಮಾರಿ ಹಾಗೂ ಅರೆ ಅಲೆಮಾರಿ 59 ಜಾತಿಗಳಿಗೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ಆಯೋಗ ಶೇ.1 ರಷ್ಟು ಮೀಸಲಾತಿ ನೀಡಿ ಪ್ರವರ್ಗ-ಎ ಗ್ರೂಪ್‌ನಲ್ಲಿ ಪ್ರಥಮ ಆದ್ಯತೆ ನೀಡಿತ್ತು.ಆದರೆ “ಸಚಿವ ಸಂಪುಟ” ಪರಿಷ್ಠರಿಸಿ ಅಲೆಮಾರಿ ಜಾತಿಗಳನ್ನು ‘ಸಿ’ ಗ್ರೂಫ್‌ನಲ್ಲಿ ಪ್ರಬಲ ಜಾತಿಗಳಾದ ಬೋವಿ, ಲಮಾಣಿ, ಕೊರಮ, ಕೊರಚರೊಂದಿಗೆ ಸೇರಿಸಿದೆ.
101 ಪರಿಶಿಷ್ಟ ಜಾತಿಗಳಲ್ಲಿ ಬಹಳ ಹಿಂದುಳಿದ ಅಸಮಾನ ಅಲೆಮಾರಿ ಜಾತಿಗಳು ಪ್ರಬಲ ಜಾತಿಗಳೊಂದಿಗೆ ಸ್ಪರ್ಧಿಸಿ ಸೌಲಭ್ಯ ಪಡೆಯಲು ಸಾಧ್ಯವೇ ಇಲ್ಲ. ಈ ಜಾತಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆದ ಒಬ್ಬ ಪದವೀದರನೂ ಸಹ ಇಲ್ಲ. ರಾಜಕೀಯ, ಉದ್ಯೋಗ ಪ್ರಾತಿನಿಧ್ಯದಲ್ಲಿ ತೀರ ಹಿಂದುಳಿದಿವೆ. ಈ ಜನಾಂಗ ಭಿಕ್ಷೆ ಬೇಡಿ, ಹಾದಿ ಬೀದಿಯಲ್ಲಿ, ಕಾಡು ಮೇಡುಗಳಲ್ಲಿ ಕಷ್ಟದ ಜೀವನ ಸಾಗಿಸುತ್ತಿದೆ. ರೇಷನ್ ಕಾರ್ಡ್ ಕೂಡ ಪಡೆದಿಲ್ಲ.ಹಾಗಾಗಿ ಅಲೆಮಾರಿಗಳನ್ನು ಮಾನವೀಯತೆಯಿಂದ ಪ್ರತ್ಯೇಕಗೊಳಿಸಿ ಪ್ರಥಮ ಆದ್ಯತೆ ನೀಡಿ ಶೇ.1 ರಷ್ಟು ಮೀಸಲಾತಿ ನೀಡಬೇಕು ಎಂದು ಅಗ್ರಹಿಸಿದರು.