Monday, March 2, 2026
Homeಟಾಪ್ ನ್ಯೂಸ್ಪರಿಶಿಷ್ಠರ ಜಾತಿ ಸಮೀಕ್ಷೆಯಲ್ಲಿ ಭೋವಿ ಸಮಾಜ ತುಂಬುವ ಮಾಹಿತಿಯುಳ್ಳ ಪೋಸ್ಟರ ಬಿಡುಗಡೆ, ಮನೆ ಮನೆಗೆ ತಲುಪಿಸುವ...

ಪರಿಶಿಷ್ಠರ ಜಾತಿ ಸಮೀಕ್ಷೆಯಲ್ಲಿ ಭೋವಿ ಸಮಾಜ ತುಂಬುವ ಮಾಹಿತಿಯುಳ್ಳ ಪೋಸ್ಟರ ಬಿಡುಗಡೆ, ಮನೆ ಮನೆಗೆ ತಲುಪಿಸುವ ಪ್ರಕ್ರಿಯೆ ಶುರು, ಶಶಿಕಲಾ ಭೀಮರಾಯ

ರಾಯಚೂರ ಮೇ :: ಭೋವಿ ಒಡ್ಡರ, ವಡ್ಡರ ಸಮಾಜದಿಂದ ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆ ಸಂದರ್ಭದಲ್ಲಿ ತಮ್ನ ಸಮುದಾಯದ ಜನರಿಗೆ ಅನುಕೂಲವಾಗಲಿ ಎಂದು ಪೋಸ್ಟರ ಬಿಡುಗಡೆ ಮಾಡಿದೆ. ಅದನ್ನು ಸಮಾಜದ ಹಿರಿಯ ಮುಖಂಡರಿಂದ ಮನೆ ಮನೆಗೆ ತೆರಳಿ ಹಂಚುವುದರ ಜೊತೆಗೆ ನಿಗದಿತ ಅರ್ಜಿಯಲ್ಲಿ ಯಾವೆಲ್ಲ ಅಂಶಗಳು ತುಂಬಬೆಕು ಎಂಬುವುದರ ಮಾಹಿತಿ ಕೊಡಲಾಗಿದೆ. ಜಾತಿ ಹೆಸರು ಬಂದಾಗ ಕಲ್ಲು ಕುಟಿಗರು, ಕಲ್ಲು ಕೆತ್ತುವವರು,ಬೀಸುವ ಕಲ್ಲು ಸಿದ್ದಪಡಿಸುವವರು, ದುರಸ್ತಿ ಮಾಡುವವರು ಮತ್ತು ಶಿಲ್ಪಿ ಮತ್ತು ಕಟ್ಟಡ ನಿರ್ಮಾಣ ಮಾಡುವವರು ಮತ್ತು ಇತರೇ ಕೆಲಸ ತೋರಿಸಲಾಗಿದೆ. ಸಾಮಾಜಿಕ ತಾರತಮ್ಯ ಕಾಲಂನಲ್ಲಿ ಮಾನಸಿಕ ಅಸ್ಪಷ್ಯತೆ ಮತ್ತು ಹಗುರ ಬೈಗಳು ಎಂದು ಬರೆಯಲಾಗಿದೆ.ಅಸಂಘಟಿತ ವಲಯದ ಕೆಲಸಗಾರರು ಎಂದು ಬರೆಯಲು ತಿಳಿಸಲಾಗಿದೆ. ಇಂದು ಭೋವಿ ಒಡ್ಡರ ಸಮಾಜದ ಮಹಿಳಾ ಘಟಕದ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಭೀಮರಾಯ ಅವರು ತಮ್ಮ ಸಮಾಜದವರ ಮನೆ ಮನೆಗೆ ತೆರಳಿ ಪೋಸ್ಟರ ನೀಡಿ, ಜಾತಿ ಸಮೀಕ್ಷೆಯಲ್ಲಿ ಗಣತಿದಾರರಿಗೆ ತಿಳಿಸುವ ಮಾಹಿತಿ ನೀಡಿದರು.ಸಮಾಜದ ಮುಖ್ಯಸ್ಥರು ಇಂದು ಪೋಸ್ಟರ ಬಿಡುಗಡೆ ಮಾಡಿದರು.

ಹೆಚ್ಚಿನ ಸುದ್ದಿ