Monday, July 7, 2025
Homeಟಾಪ್ ನ್ಯೂಸ್ಭಾರತ ಸೇನೆ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿ ಸ್ವಾಗತಾರ್ಹ: ಅಶೋಕ ದುದ್ದಗಿ

ಭಾರತ ಸೇನೆ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿ ಸ್ವಾಗತಾರ್ಹ: ಅಶೋಕ ದುದ್ದಗಿ

ಅಫಜಲಪುರ: ಏನೂ ಅರಿಯದ ಮುಗ್ಧ 26 ಭಾರತೀಯರ ಹತ್ಯೆ ಮಾಡಿದ್ದಲ್ಲದೆ ಪದೇ ಪದೆ ಭಾರತದ ಮೇಲೆ ದಾಳಿ, ಕುತಂತ್ರ ಮಾಡಿ ಭಾರತೀಯರ ಸಹನೆ, ಸ್ವಾಭಿಮಾನ ಕೆಣಕುತ್ತಿರುವ ಪಾಪಿ ಪಾಕಿಸ್ತಾನದ ಉಗ್ರರ ಅಟ್ಟಹಾಸ ಮಟ್ಟ ಹಾಕುವ ದಿಟ್ಟ ನಿರ್ಧಾರ ಖುಷಿ ತಂದಿದೆ. ಎಂದು ಕೋಲಿ ಸಮಾಜದ ಯುವ ಮುಖಂಡ ಹಾಗೂ ದೇಶ ಪ್ರೇಮಿ ಅಶೋಕ ದುದ್ದಗಿ ಅವರು ಹರ್ಷ ವ್ಯಕ್ತಪಡಿಸಿದರು.

ಭಾರತದ ಸೇನೆಯ ಮೇಲೆ ಅಪಾರ ಗೌರವ, ವಿಶ್ವಾಸವಿದ್ದು ಭಾರತ ಮಾತೆಯ ಮಕ್ಕಳಾದ ನಾವೆಲ್ಲ ನಮ್ಮೊಳಗಿನ ಭೇದ ಭಾವ ಬದಿಗೊತ್ತಿ ದೇಶದ ರಕ್ಷಣೆಗೆ.ಕಂಕಣಬದ್ಧರಾಗೋಣ.

ಪಾಕ್ ಕ್ಷಿಪಣಿಗಳನ್ನು ಗಡಿಯಲ್ಲೇ ನಿಷ್ಕ್ರಿಯಗೊಳಿಸಿದಸುದರ್ಶನ ಚಕ್ರ.

ಭಾರತ-ಪಾಕಿಸ್ತಾನ ನಡುವೆ ಘನಘೋರ ಕ್ಷಿಪಣಿ ದಾಳಿ ಭಾರತ ಉಗ್ರರ ಮೇಲೆ ದಾಳಿ ನಡೆಸಿದರೂ ಕಾಲು ಕೆರೆದು ಪಾಕಿಸ್ತಾನ ಯುದ್ಧ ಕಾಶ್ಮೀರ, ಪಂಜಾಬ್, ರಾಜಸ್ಥಾನದ ಮೇಲೆ ದಾಳಿ ಭಾರತದ ತಿರುಗೇಟಿಗೆ ಲಾಹೋರ್ ಏರ್ ಡಿಫೆನ್ಸ್ ವ್ಯವಸ್ಥೆ ಧ್ವಂಸ ದಾಳಿಗೆ ಬಂದ ಎಫ್ 16, ಜೆಎಫ್ 17 ಉರುಳಿಸಿದ ಭಾರತದ ಸೇನಾಪಡೆ. ಭಾರತೀಯ ಸೇನೆಯ ಬಗ್ಗೆ ನನಗೆ ಹೆಮ್ಮೆಯಿದೆ ಜೈ ಹಿಂದ್.ಜೈ ಭಾರತ

ಹೆಚ್ಚಿನ ಸುದ್ದಿ