ಮುದ್ದೇಬಿಹಾಳ:
ಗ್ರಾಮೀಣ ಭಾಗದಲ್ಲಿ ಯಾವುದೇ ಕ್ಷೇತ್ರವಾದರೂ ಹೆಚ್ಚಿನ ಆಸಕ್ತಿ ಜೊತೆಗೆ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಲಾಗುತ್ತದೆ. ಆದರೆ ಯಾವುದೇ ಕ್ಷೇತ್ರದಲ್ಲೂ ಮುನಿಸು ಬಿಟ್ಟರೆ ಜಗಳಕ್ಕೆ ಅವಕಾಶ ಕೊಡಲಾಗುವುದಿಲ್ಲ. ಈ ಕಾರ್ಯದಲ್ಲಿ ಯರಝರಿ ಗ್ರಾಮ ಪ್ರಮುಖವಾಗಿದೆ ಎಂದು ಯುವ ಮುಖಂಡ ಮಲ್ಲಣ್ಣ ಅಪರಾಧಿ ಹೇಳಿದರು.
ತಾಲೂಕಿನ ಯರಝರಿ ಗ್ರಾಮ ಪಂಚಾಯತನಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದಿನಿಂದಲೂ ನಮ್ಮ ಗ್ರಾಮ ಪಂಚಾಯತಿಯಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲದೆ ಸರ್ವ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಾ ಬರಲಾಗುತ್ತಿದೆ. ಇದಕ್ಕಾಗಿಯೇ ಇಂದು ಪಂಚಾಯತಿ ಸದಸ್ಯರಾಗಿ ಆಯ್ಕೆಯಾದವರಿಗೆ ಸನ್ಮಾನಿಸಿ ಬೀಳ್ಕೊಡುಗೆ ಮಾಡಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಸನ್ಮಾನ:
ಯರಝರಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಗುರುವಾರ ಪಂಚಾಯಿತಿಯಿಂದ ಸನ್ಮಾನ ಮಾಡುವ ಮೂಲಕ ಬೀಳ್ಕೊಡುಗೆ ಸಮಾರಂಭವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಅಪರಾಧಿ, ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಗುರಿಕಾರ, ಉಪಾಧ್ಯಕ್ಷ ಬಸವರಾಜ ಚಲವಾದಿ, ಸದಸ್ಯರಾದ ಲಕ್ಷ್ಮಣ ಯಲಗೂಡ, ತಮ್ಮನಗೌಡ ಹುಲ್ಲೂರ, ಅಮೀನಪ್ಪ ಗಡೇದ, ಸೀತವ್ವ ಭಜಂತ್ರಿ, ಸಂಗನಬಸವ್ವ ಕಾಡಮಗೇರಿ, ಸೋಮಣ್ಣ ತುರಡಗಿ, ರಾಜೇಶ್ವರಿ ಬಿರಾದಾರ, ಮಹ್ಮದ ಇಬ್ರಾಹಿಂ ಮಾಗಿ, ಸುಮಿತ್ರಾ ಪಾಟೀಲ, ಸುರೇಶ ಚೌಧರಿ, ಯಲ್ಲವ್ವ ಮಾದರ, ಮಹಾದೇವಿ ಶಿವಣಗಿ, ಅಕ್ಕಮ್ಮ ಬಿರಾದಾರ, ಬಸಮ್ಮ ಕೋಲಕಾರ, ಪಿಡಿಓ ಭರಮಣ್ಣ ಯಾತಗಿರಿ, ಕಾರ್ಯದಶಿ ವಿಲಾಸ ಲಮಾಣಿ, ವಿರುಪಾಕ್ಷಿ ಗುರಿಕಾರ, ದೇವರಾಜ ಮೇಟಿ, ಶಿವಾನಂದ ಮಾದರ, ಸಿದ್ದಪ್ಪ ಕಂಬಾರ, ಪತ್ತೆಸಾ ಮುಕಿಹಾಳ, ಶೇಖರಯ್ಯ ಹಿರೇಮಠ ಇದ್ದರು.

