Monday, October 13, 2025
Homeಟಾಪ್ ನ್ಯೂಸ್ಯೋಗೇಶ್​ ಗೌಡ ಕೊ* ಕೇಸ್​, ಕೋರ್ಟ್​ ಆವರಣದಲ್ಲೇ ಮಹಿಳೆಗೆ ಧಮ್ಕಿ ಆರೋಪ!

ಯೋಗೇಶ್​ ಗೌಡ ಕೊ* ಕೇಸ್​, ಕೋರ್ಟ್​ ಆವರಣದಲ್ಲೇ ಮಹಿಳೆಗೆ ಧಮ್ಕಿ ಆರೋಪ!

ಮಹಿಳೆ ನೀಡಿದ್ದ ಮಾಹಿತಿ ಆಧರಿಸಿ ಎಸ್​ಪಿಪಿ ಗಂಗಾಧರ್ ಶೆಟ್ಟಿ ಅವರಿಂದ ಮೆಮೋ ಸಲ್ಲಿಕೆ ಆಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ ಭಟ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.

ಬೆಂಗಳೂರು (ಜೂ 13): ಜಿಲ್ಲಾ ಪಂಚಾಯತ್​​ ಸದಸ್ಯ ಯೋಗೇಶ್ ಗೌಡ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಮಹಿಳಾ ಸಾಕ್ಷಿಯೊಬ್ಬರಿಗೆ ಕೋರ್ಟ್ ಕಾರಿಡಾರ್​​ನಲ್ಲಿ ಆರೋಪಿ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಎ9 ಅಶ್ವಥ್ ಗೌಡ ಎಂಬುವವರ ಮೇಲೆ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಮಹಿಳೆ ಈ ಬಗ್ಗೆ ಕೋರ್ಟ್ ಇಮೇಲ್ ಮಾಡಿದ್ದಾರೆ.
ವಿಚಾರಣೆ ನಡೆಸಿ ತನಿಖೆಗೆ ಕೋರ್ಟ್​ ಆದೇಶ
ಆರೋಪಿಗಳು ಬೆದರಿಕೆ ಹಾಕ್ತಿದ್ದಾರೆ ಎಂದು ಕೋರ್ಟ್ ಹಾಗೂ ಸಿಬಿಐ ಅಧಿಕಾರಿಗಳಿಗೂ ಇ-ಮೇಲ್ ಮಾಡಿ ಮಹಿಳೆ ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ್ದ ಮಾಹಿತಿ ಆಧರಿಸಿ ಎಸ್​ಪಿಪಿ ಗಂಗಾಧರ್ ಶೆಟ್ಟಿ ಅವರಿಂದ ಮೆಮೋ ಸಲ್ಲಿಕೆ ಆಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ ಭಟ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.

ಮೂರು ಬಾರಿ ಬೆದರಿಕೆ ಹಾಕಿದ ಆರೋಪ
CISF ನಿಂದ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ. ಅಲ್ಲದೇ ಒಮ್ಮೆಯಲ್ಲ ಮಹಿಳೆಗೆ ಮೂರು ಬಾರಿ ಬೆದರಿಕೆ ಹಾಕಿರುವುದಾಗಿ ಮಾಹಿತಿ ಹೊರಬಿದ್ದಿದೆ. ಸಾಕ್ಷಿ ಕೋರ್ಟ್​ಗೆ ಬಂದಾಗ ಕೋರ್ಟ್ ಹಾಲ್​​ನ ಹೊರ ಭಾಗದಲ್ಲಿಯೇ ಬೆದರಿಕೆ ಹಾಕಿದ್ರು ಎಂಬ ಆರೋಪ ಇದೆ.

ಇದೇ ವೇಳೆ ಆರೋಪಿ ಅಶ್ವಥ್ ಗೌಡ ಅವರ ಜಾಮೀನು ರದ್ದು ಮಾಡುವಂತೆ ಸಿಬಿಐ ಮನವಿ ಮಾಡಿತ್ತು. ಇತ್ತ ಆರೋಪಿ ಪರ ವಕೀಲರು ಇದು ಸುಳ್ಳು ಆರೋಪ, ಬೆದರಿಕೆ ಹಾಕಿದ್ದ ದಿನವೇ ತಮಗೆ ತಿಳಿಸಬಹುದಿತ್ತು ಎಂದು ವಾದ ಮಂಡಿಸಿದ್ದಾರೆ.
ಸಾಕ್ಷಿಗೆ ಭದ್ರತೆ ನೀಡಲು ಸೂಚನೆ
ಈ ಹಿಂದೆ ಬೆದರಿಕೆ ಹಾಕಿದ್ರಾ ಎಂದಾಗ ಅರೋಪಿ ಇಲ್ಲ ಎಂದಿದ್ರು ಎಂದು ತಿಳಿಸಿದ್ದ ವಕೀಲರು ತಿಳಿಸಿದ್ರು. ಆದ್ರೆ ಇದು ಮೂರನೇ ಬಾರಿ ಎಂದು ಹೇಳಿದ ನ್ಯಾಯಾಧೀಶರು, ಸಾಕ್ಷಿಗೆ ಭದ್ರತೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಸ್​ಪಿಪಿ ಗಂಗಾಧರ ಶೆಟ್ಟಿ ಹೇಳಿದ್ದೇನು?
ಇದೇ ವಿಚಾರವಾಗಿ ಮಾತಾಡಿದ ಎಸ್​ಪಿಪಿ ಗಂಗಾಧರ ಶೆಟ್ಟಿ, ಸುಪ್ರೀಂ ಕೋರ್ಟ್ ನಲ್ಲಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಒಂದು ವಾರದ ಒಳಗೆ ನ್ಯಾಯಲಯಕ್ಕೆ ಹಾಜರಾಗಲು ಆದೇಶ ನೀಡಲಾಗಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾದ ಮೇಲೆ ಅವರನ್ನ ಜೈಲಿಗೆ ಕಳಿಸಲಾಗಿದೆ
ಇತ್ತೀಚೆಗೆ ಹೈ ಕೋರ್ಟ್ ನಲ್ಲಿ ಚಂದ್ರಶೇಖರ ಎಂಬ ಆರೋಪಿ ಜಾಮೀನು ಅರ್ಜಿಯನ್ನೂ ಹೈ ಕೋರ್ಟ್ ವಜಾ ಮಾಡಿತ್ತು. ಇದು ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಎಂದ್ರು. ಯಾರೇ ಆಗಿದ್ರು ತಪ್ಪು ಮಾಡಿದ್ರೆ ಅಂತವರ ವಿರುದ್ಧ ಕ್ರಮ ಆಗುತ್ತೆ, ನ್ಯಾಯಲಯದಲ್ಲಿಯೇ ನೇರವಾಗಿ, ಪರೋಕ್ಷವಾಗಿ ಸಾಕ್ಷಿಧಾರರಿಗೆ ಬೆದರಿಕೆ ಹಾಕುವ ಕೆಲಸಗಳು ಆಗ್ತಿದೆ. ಅಂತವರ ಬಗ್ಗೆ ನ್ಯಾಯಲಯ ಕ್ರಮ ಕೈಗೊಳ್ಳುತ್ತೆ ಎಂದ್ರು.ಎ9 ಅಶ್ವಥ್ ಎಂಬಾತ ಮಹಿಳಾ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ್ದ. ಸಾಕ್ಷಿಧಾರರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ವಿ. ಕೇಂದ್ರ ತನಿಖಾ ಸಂಸ್ಥೆಯಿಂದ ಮಹಿಳಾ ಸಾಕ್ಷಿಗೆ ರಕ್ಷಣೆ ಆದೇಶ ಆಗಿದೆ. ಅಶ್ವಥ್ ಜಾಮೀನು ರದ್ದು ಮಾಡಲು ಮನವಿ ಮಾಡಲಾಗಿದೆ ಎಂದು ಎಸ್​ಪಿಪಿ ಗಂಗಾಧರ ಶೆಟ್ಟಿ ಹೇಳಿ ನೀಡಿದ್ದಾರೆ.

ಹೆಚ್ಚಿನ ಸುದ್ದಿ