Monday, October 13, 2025
Homeರಾಜ್ಯರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ: ಈರುಳ್ಳಿ ಬೆಳೆಯಿಂದ ಕಂಗಾಲಾದ ಮುದ್ದೇಬಿಹಾಳ ರೈತರು...! ಸಮೀಕ್ಷೆಗೆ...

ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ: ಈರುಳ್ಳಿ ಬೆಳೆಯಿಂದ ಕಂಗಾಲಾದ ಮುದ್ದೇಬಿಹಾಳ ರೈತರು…! ಸಮೀಕ್ಷೆಗೆ ತಹಸೀಲ್ದಾರ್ ಮದ್ಯಸ್ಥಿಕೆ ವಹಿಸಲಿ ಸಾರ್ವಜನಿಕರ ಆಗ್ರಹ…!!!

ಮುದ್ದೇಬಿಹಾಳ:

ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಗಳು ಸರಿಯಾದ ಸಮಯಕ್ಕೆ ಆಗಿದ್ದು ಕಳೆದ ಬಾರಿ ಕೇವಲ 263 ಹೆಕ್ಟರ್ ಬಿತ್ತನೆ ಮಾಡಿದ ಈರುಳ್ಳಿ ಬೆಳೆಯನ್ನು ಈ ಬಾರಿ 700ಹೆಕ್ಟರ್‍ನಷ್ಟು ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು.

ತಾಲೂಕಿನ ಮಲಗಲದಿನ್ನಿ ಸೀಮೆಯ ರೈತ ಮಲ್ಲಿಕಾರ್ಜುನ ಪ್ಯಾಟಿ ಎಂಬುವರು ತಮ್ಮ 4 ಎಕರೆ ಜಮೀನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಇತ್ತಿಚಿಗಷ್ಟೇ ಸುರಿದ ಮಳೆಗೆ ಈರುಳ್ಳಿ ಇಳುವರಿ ಸಂಪೂರ್ಣ ನಾಶವಾಗಿದೆ. ಇದಕ್ಕೆ ಬೆಳೆವಿಮಾವನ್ನು ತುಂಬಿರುವ ಪ್ಯಾಟಿ ಅವರು ಮಳೆಯಿಂದ ಹಾನಿಯಾದ ಈರುಳ್ಳಿಗೆ ಅಲ್ಪಮಟ್ಟಿಗಾದರೂ ಪರಿಹಾರ ಸಿಗುತ್ತದೆ ಎಂಬ ಆಸೆಯೂ ಮಣ್ಣುಪಾಲಾದಂತಾಗಿದೆ.

ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷ:

ತೋಟಗಾರಿಕೆ ಬೆಳೆಗಳ ಬಗ್ಗೆ ಜಿಪಿಎಸ್ ಮೂಲಕ ಎಲ್ಲ ರೈತರ ಜಮೀನುಗಳಿಗೆ ತೆರಲಿ ಅಲ್ಲಿನ ವಾಸ್ತವ್ಯದ ಬಗ್ಗೆ ವರದಿ ಮಾಡಿ ಸರಕಾರಕ್ಕೆ ಒಪ್ಪಿಸಬೇಕು. ಆದರೆ ಮುದ್ದೇಬಿಹಾಳ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ ತೋರಿಸುತ್ತಿದ್ದಾರೆ. ಇದರಿಂದ ರೈತರಿಗೆ ವಿಮಾ ಕಂಪನಿಗಳಿಂದ ದೊರಕಬೇಕಾದ ಪರಿಹಾರ ಹಣ ರೈತರ ಕೈತಪ್ಪುವ ಲಕ್ಷಣಗಳು ಕಂಡು ಬರುತ್ತಿವೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ತೋಟಗಾರಿಕೆ ಇಲಾಖೆಗೆ ಲಿಖಿತವಾಗಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಬೆಟ್ಟ ಗ್ರಾಮದ ರೈತರು ಆರೋಪಿಸುತ್ತಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಅಗಸ್ಟ ತಿಂಗಳಲ್ಲಿ ಒಟ್ಟೂ 23 ಹೆಕ್ಟರ್ ಜಮೀನುಗಳ ಜಿಪಿಎಸ್ ಮಾಡಿ ಬೆಲೆ ಹಾನಿ ಬಗ್ಗೆ ವರದಿ ಮಾಡಲಾಗಿದೆ. ಸದ್ಯಕ್ಕೆ ಮಳೆ ಪ್ರಮಾಣ ಹೆಚ್ಚಾದ ಕಾರಣ ಸಮೀಕ್ಷೆ ಮಾಡಲು ಆಗುತ್ತಿಲ್ಲ. ಶೀಘ್ರದಲ್ಲಿಯೇ ಇನ್ನೂಳಿ ಎಲ್ಲಾ ರೈತರ ಜಮೀನುಗಳಿಗೆ ತೆರಲಿ ಬೆಳೆಹಾನಿ ಸಮೀಕ್ಷೆಯನ್ನು ಮಾಡಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆ ನೆಪವನ್ನು ಹೇಳುತ್ತಿದ್ದಾರೆ ಎಂದು ಬೈಲಕೂರ ಗ್ರಾಮದ ಡಿಎಸ್‍ಎಸ್ ಮುಖಂಡ ಜಗದೇವರಾವ್ ಚಲವಾದಿ ಆರೋಪಿಸಿದ್ದಾರೆ.

ತಹಸೀಲ್ದಾರ ಮದ್ಯಸ್ಥಿಕೆ ವಹಿಸಲಿ:

ಈಗಾಗಲೇ ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿರುವ ರೈತರು ಈರುಳ್ಳಿ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬಿತ್ತನೆ ಮಾಡಿ ಅವುಗಳಿಗೆ ಗೊಬ್ಬರ ಸೇರದಂತೆ ಇನ್ನಿತರ ಖರ್ಚುಗಳನ್ನು ಮಾಡಿದ್ದಾರೆ. ಆದರೆ ಮಳೆ ಪ್ರಮಾಣ ಹೆಚ್ಚಾದ ಕಾರಣ ಮುಂಗಾರು ಬೆಳೆಗಳಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಬಿತ್ತನೆ ಮಾಡಲಾದ ಈರುಳ್ಳಿ ಹಾಗೂ ಟೊಮೆಟೊ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಇದನ್ನೆ ನಂಬಿದಂತ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಬೆಳೆವಿಮಾ ಒದಗಿಸುವಲ್ಲಿ ಕೆಲ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದು ಕೂಡಲೇ ಮುದ್ದೇಬಿಹಾಳ ತಹಸೀಲ್ದಾರ ಅವರು ಮದ್ಯಸ್ಥಿಕೆ ವಹಿಸಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಕೂಡಲೇ ಬೆಳೆ ಹಾನಿ ಸಮೀಕ್ಷಯ ವರದಿ ಸಿದ್ದಪಡಿಸುವಂತೆ ಸೂಚಿಸಬೇಕು. ಇದರಿಂದ ಕಂಗಾಲಾಗಿರುವ ರೈತರು ಬಿತ್ತನೆಗೆ ತಾವು ಹಾಕಿದ ಹಣವನ್ನಾದರೂ ಮರಳಿ ಡಯುವಂತಾಗುತ್ತದೆ ಎಂದು ರೈತರ ಪರ ಚಿಂತರು ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ