Monday, October 13, 2025
Homeಜಿಲ್ಲಾ ಸುದ್ದಿಗಳುಶಕ್ತಿ ಯೋಜನೆಯ ಸಂಭ್ರಮಾಚರಣೆ 9ಘಂಟೆಗೆ ಇಳಕಲ್ ಬಸ್ ನಿಲ್ದಾಣ ಹಾಗೂ 9.30ಕ್ಕೆಹುನಗುಂದ ನಗರದ ಬಸ್ ನಿಲ್ದಾಣ...

ಶಕ್ತಿ ಯೋಜನೆಯ ಸಂಭ್ರಮಾಚರಣೆ 9ಘಂಟೆಗೆ ಇಳಕಲ್ ಬಸ್ ನಿಲ್ದಾಣ ಹಾಗೂ 9.30ಕ್ಕೆಹುನಗುಂದ ನಗರದ ಬಸ್ ನಿಲ್ದಾಣ ಮಾಡಲಾಗುತ್ತೆ ಶಾಸಕ ಕಾಶಪ್ಪನವರ

ಇಲಕಲ್ಲ:ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹತ್ವದ ಯೋಜನೆಯದ ಶಕ್ತಿ ಯೋಜನೆಯು ದಿನಾಂಕ:-11.06.2023 ಜಾರಿಗೊಳಿಸುವ ಮೂಲಕ ಇಂದಿಗೆ ಎರಡು ವರ್ಷ ಪೂರೈಸಿ ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಸರಿಸುಮಾರು 500ಕೋಟಿ ಫಲಾನುಭವಿಗಳು ಪ್ರಯಾಣ ಮಾಡುವ ಮೂಲಕ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ ಈ ವಿಚಾರವಾಗಿ ಸಂಭ್ರಮಾಚರಣೆ ಮಾಡುತ್ತೆವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನರ ಹೇಳಿದ್ದಾರೆ.

ಸದರಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರ ಸಮ್ಮುಖದಲ್ಲಿ ದಿನಾಂಕ 14.07.2025 ರಂದು ಮುಂಜಾನೆ 9ಘಂಟೆಗೆ ಇಳಕಲ್ ನಗರದ ಬಸ್ ನಿಲ್ದಾಣ ನಂತರ ಮುಂಜಾನೆ 09.30ಘಂಟೆಗೆ
ಹುನಗುಂದ ನಗರದ ಬಸ್ ನಿಲ್ದಾಣ ದಲ್ಲಿ ಆಯೋಜಿಸಲಾಗಿದ್ದು ಸದರಿ ಕಾರ್ಯಕ್ರಮದಲ್ಲಿ ನಗರಸಭೆ, ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು,ಕಾಂಗ್ರೆಸ್ ಪಕ್ಷದ ಮುಖಂಡರು,ಚುನಾಯಿತ ಪ್ರತಿನಿಧಿಗಳು,ಎಲ್ಲಾ ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಭಾಗವಹಿಸುವರು.

ಹೆಚ್ಚಿನ ಸುದ್ದಿ