
ಕುಷ್ಟಗಿ:ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹತ್ವದ ಯೋಜನೆಯದ ಶಕ್ತಿ ಯೋಜನೆಯು ದಿನಾಂಕ:-11.06.2023 ಜಾರಿಗೊಳಿಸುವ ಮೂಲಕ ಇಂದಿಗೆ ಎರಡು ವರ್ಷ ಪೂರೈಸಿ ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಸರಿಸುಮಾರು 500ಕೋಟಿ ಫಲಾನುಭವಿಗಳು ಪ್ರಯಾಣ ಮಾಡುವ ಮೂಲಕ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ ಈ ವಿಚಾರವಾಗಿ ಸಂಭ್ರಮಾಚರಣೆ ಮಾಡುತ್ತೆವೆ ಎಂದು ಕುಷ್ಟಗಿ ತಾಲ್ಲೂಕ ಗ್ಯಾರಂಟಿಯೋಜನೆಯ ಅಧ್ಯಕ್ಷರಾದ ಶ್ರೀ ಪಾರೋಕ ಡಾಲಾಯತ್ ಹೇಳಿದ್ದಾರೆ.ಸದರಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹಾಗೂ ಕುಷ್ಟಗಿ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಅಮರೇಗೌಡಪಾಟೀಲಬಯ್ಯಾಪೂರ ಅವರ ಸಮ್ಮುಖದಲ್ಲಿ ದಿನಾಂಕ 14.07.2025 ರಂದು ಮುಂಜಾನೆ 10:.30ಘಂಟೆಗೆಕುಷ್ಟಗಿ ನಗರದ ಬಸ್ ನಿಲ್ದಾಣ ದಲ್ಲಿ ಆಯೋಜಿಸಲಾಗಿದ್ದು ಸದರಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು,ಕಾಂಗ್ರೆಸ್ ಪಕ್ಷದ ಮುಖಂಡರು,ಚುನಾಯಿತ ಪ್ರತಿನಿಧಿಗಳು,ಎಲ್ಲಾ ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಭಾಗವಹಿಸುವರು.
ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ
