ಮುದ್ದೇಬಿಹಾಳ 04:
ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಶಾಸಕರಾದ ಸಂತೋಷ ಲಾಡ ಅವರು ತಾವು ಹುಟ್ಟಿಹಾಕಿದ ಸಂತೋಷ ಲಾಡ ಫೌಡೇಶನವತಿಯಿಂದ ಬಡ ಜನರಿಗೆ ವಿವಿಧ ರೀತಿಯ ಸಹಾಯಹಸ್ತವನ್ನು ನೀಡಿದ್ದಾರೆ. ಈ ಸಹಾಯಹಸ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಸ್ಥಳೀಯ ಸಂತೋಷ ಲಾಡ ಅವರ ಅಭಿಮಾನಿಗಳಿಗೆ ಹರ್ಷ ಬಂದಂತಾಗಿದೆ.
ಹಿಂದೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಪಟ್ಟಣದಲ್ಲಿ ಜನಿಸಿದ ರಮೇಶ ತಾಳಿಕೋಟಿ ಎಂಬ ಯುವಕ ತನ್ನ 5ನೇ ವರ್ಷದಲ್ಲಿಯೇ ಅಪಘಾದಲ್ಲಿ ಒಂದು ಕಾಲನ್ನು ಕಳೆದುಕೊಂಡನು. ನಂತರ ಜೀವನಕ್ಕಾಗಿ ಕೂಲಿ ಮಾಡಿಕೊಂಡಿದ್ದನು. ಇಂತಹ ವ್ಯಕ್ತಿಯನ್ನು ಕಂಡು ಶ್ವೇತಾ ಎಂಬ ಯುವತಿ ಪ್ರೇಮದಲ್ಲಿ ಬಿದ್ದು ರಮೇಶನನ್ನು ಮದುವೆಯೂ ಆದಲು ಆದರೆ ಈ ಮದುವೆ ಯಾರೊಬ್ಬ ಕುಟುಂಬಸ್ಥರಿಗೂ ಇಷ್ಟ ಿರದ ಕಾರಣ ಇವರನ್ನು ಮನೆಯಿಂದ ಹೊರಗೆ ಹಾಕಿದರು. ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಛಲದಲ್ಲಿ ಶ್ವೇತಾ ರಮೇಶ ದಂಪತಿಗಳು ರಾಜ್ಯದ ವಿವಿಧಡೆ ಕೂಲಿ ಕೆಲಸವನ್ನು ಮಾಡಿದರು. ನಂತರ ಮೂರು ಮಕ್ಕಳೊಂದಿಗೆ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದರು. ಆದರೆ ಯಾವುದೇ ಆರ್ಥಿಕ ಬೆಂಬಲವಿಲ್ಲದ ಕಾರಣ ಮುದ್ದೇಬಿಹಾಳ ಪಟ್ಟಣದಲ್ಲಿ ಬೀದಬದಿಯಲ್ಲಿ ಒಂದು ಸಣ್ಣ ಆಹಾರ ಅಂಗಡಿಯನ್ನು ತೆರೆದು ವ್ಯಾಪಾರವನ್ನು ಪ್ರಾರಂಭಿಸಿದರು. ಆದರೆ ಅಂಗಡಿಯ ಬಾಡಿಗೆ ತುಂಬಲೂ ಕಷ್ಟಕರವಾದ ಸಂದರ್ಭದಲ್ಲಿ ಹಿತಾಷೇಯಾದ ದಂಪತಿಗಳಿಗೆ ಸಂತೋಷ ಲಾಡ ಅಭಿಮಾನಿಯೊಬ್ಬರು ಪರಿಚಯಸ್ಥರಾಗಿ ದಂಪತಿಗಳಿಗೆ ಲಾಡ ಫೌಂಡೇಶನನಿಂದ ಸಹಾಯಹಸ್ತ ಬರುವಂತೆ ಆಯಿತು.
ಬಡ ಕುಟುಂಬವನ್ನು ಗುರುತಿಸಿ ಪರಿಷಯಿಸಿದ ಚೇತನ ಕರೆಡ್ಡಿ:
ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳನ್ನು ನೋಡಿ ಅವರ ಕಷ್ಟಗಳನ್ನು ಕೇಳಿದ ಸ್ಥಳೀಯ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಚೇತನ ಕರೆಡ್ಡಿ ದಂಪತಿಗಳನ್ನು ಸಚಿವ ಸಂತೋಷ ಲಾಡ ಅವರ ಆಪ್ತ ಸಲೇಹೆಗಾರರೊಂದಿಗೆ ಮಾತನಾಡಿ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು. ನಂತರ ಸಂತೋಷ ಲಾಡ ಅವರ ಫೌಂಡೇಶನ್‍ವತಿಯಿಂದ ದಂಪತಿಗಳಿಗೆ ನೂತನ ತಳ್ಳು ಗಾಡಿಯನ್ನು ಉಚಿತವಾಗಿ ನೀಡಲಾಯಿತು.
ಜನ ಸೇವೆಗೆ ಸದಾ ಸಿದ್ದವಿರುವ ಸಚಿವ ಸಂತೋಷ ಲಾಡ:
ರಾಜಕೀಯ ರಂಗದಲ್ಲಿ ಸಾಕಷ್ಟು ಜನರು ಸಮಾಜ ಸಮಾಜಕ್ಕೆ ಮಾಡುವ ಸೇವೆಯನ್ನು ತಮ್ಮ ಸ್ವಂತ ಕುಟುಂಬಕ್ಕೆ ಮಾಡಿಕೊಂಡು ತಮ್ಮ ಕುಟುಂಬದ ಏಳಿಗೆಯನ್ನು ಮಾಡಿಕೊಂಡು ರಾಜಕೀಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ ರಾಜಕೀಯ ನಾಯಕನಾಗಿ ಉತ್ತಮ ಸಮಾಜ ಸೇವೆ ಮಾಡಬಹುದು ಎಂದು ವಿಶ್ವವ್ಯಾಪ್ತಿಯಲ್ಲಿ ತೋರಿಸಿಕೊಟ್ಟ ಪ್ರಥಮ ನಾಯಕರಾಗಿ ರಾಜ್ಯ ಸಚಿವ ಸಂತೋಷ ಲಾಡ ಅವರು. ತಮ್ಮ ರಾಜಕೀಯ ಜೀವನವನ್ನು ಜೆಡಿಎಸ್‍ನೊಂದಿಗೆ ಪ್ರಾರಂಭಿಸಿದ ಸಂತೋಷ ಲಾಡ ಅವರು 2003ರಲ್ಲಿ ಸಂಡೂರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಾದರು. ನಂತರ ಕಾಂಗ್ರೇಸ್ ಪಕ್ಷಕ್ಕೆ 2007ರಲ್ಲಿ ಸೇರ್ಪಡೆಯಾದ ಸಂತೋಟ ಲಾಡ ದಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ 45000 ಮತಗಳ ಅಂತದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು. 1998ರಲ್ಲಿ ಕೌನ್ಸುಲರ್ ಆಗಿ ಆಯ್ಕೆಯಾಗಿ ರಾಜಕೀಯ ರಂಗದಲ್ಲಿ ಪ್ರವೇಶಿಸಿದ ಸಂತೋಷ ಲಾಡ ಅವರು ರಾಜ್ಯದ ವಿವಿಧ ಸಚಿವಗಿರಿಯ ಅಧಿಕಾರದಲ್ಲಿದ್ದು ಇಲ್ಲಿಯವರೆಗೂ ಬಡ ಕುಟುಂಬಸ್ಥರಿಗೆ ಸೇವೆ ಮಾಡುತ್ತಾ ಬಂದಿದ್ದಾರೆ.
ಲಾಡ ಫೌಡೇಶನ್‍ಗೆ ಅಭಿನಂದನೆ ಸಲ್ಲಿಸಿದ ರಮೇಶ:
ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಬಯಸಿದ ರಮೇಶ ಹಾಗೂ ಶ್ವೇತಾ ದಂಪತಿಗಳಿಗೆ ತಮ್ಮ ಕುಟುಂಬಸ್ಥರಿಂದಲೇ ಯಾವುದೇ ಸಹಾಯವಾಗಲಿಲ್ಲ. ಆದರೆ ಎಲ್ಲೋ ಇರುವ ಸಚಿವ ಸಂತೋಷ ಲಾಡ ಅವರು ತಮಗೆ ಸಹಾಯಹಸ್ತ ಚಾಚಿ ಉಚಿತವಾಗಿ ತಳ್ಳುಗಾಡಿಯನ್ನು ನೀಡಿದ್ದು ಇದರಿಂದಲೇ ನಮ್ಮ ಜೀವನವನ್ನು ಸ್ವಾಭಿಮಾನದಿಂದ ನಡೆಸಿ ನಮ್ಮನ್ನು ನಿರ್ಲಕ್ಷಿಸಿದ ಜನರ ಮುಂದೆ ಜೀವನವನ್ನು ಮಾಡಿ ತೋರಿಸುವಂತಾಯಿತು ಎಂದ ರಮೇಶ ತಾಳಿಕೋಟಿ ಲಾಡ ಫೌಡೇಶನ ಹಾಗೂ ಚೇತನ ಕರೆಡ್ಡಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸರಕಾರಿ ಸೌಲಭ್ಯದಿಂದ ವಂಚಿತ ಕುಟುಂಬ:
ರಮೇಶ ತನ್ನ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು ಸರಕಾರದಿಂದ ತಿಂಗಳ ಮಾಶಾಸನ ಬಿಟ್ಟು ಬೇರೆ ಯಾವುದೇ ಸರಕಾರಿ ಸೌಲಭ್ಯವನ್ನು ತೆಗೆದುಕೊಂಡಿಲ್ಲ. ಸದ್ಯಕ್ಕೆ ರಮೇಶ ಮಾಡಿಸಿದ್ದ ವಿಕಲಚೇತನರ ಗುರುತಿನಿ ಚೀಟಿ ಹಳೆಯದಾದ ಕಾರಣ ಬರುತ್ತಿದ್ದ ಮಾಶಾಸನವೂ ನಿಂತಿದೆ. ಇದರ ಬಗ್ಗೆ ಸ್ಥಳೀಯ ವಿಕಲಚೇತನ ಇಲಾಖೆಯಿಂದ ನೇಮಕೊಂಡಿರುವ ವ್ಹಿಆರ್‌ಬಡ್ಲೂ ಅಥವಾ ಎಂಆರ್‌ಡ್ಲೂ ಅವರು ರಮೇಶನನ್ನು ಸಂಪರ್ಕಿಸಿ ಸರಕಾರದ ನೂತನ ವಿಕಲಚೆತನ ಗುರುತಿನಿ ಚೀಟಿಯನ್ನು ನೀಡಲು ಮುಂದಾಗಿರುವದು ವಿಪರ್ಯಾಸದ ಸಂಗತಿಯಾಗಿದೆ.