Monday, July 7, 2025
Homeಜಿಲ್ಲಾ ಸುದ್ದಿಗಳುಸಕಲ ಸರ್ಕಾರಿ ಗೌರವಗಳೊಂದಿಗೆ ಜುಮಾಲಾಪುರ ತಾಂಡದಲ್ಲಿ ಯೋಧನ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಜುಮಾಲಾಪುರ ತಾಂಡದಲ್ಲಿ ಯೋಧನ ಅಂತ್ಯಕ್ರಿಯೆ

ನಾರಾಯಣಪುರ ಜು 13 : ಬಿಳಿ ರಕ್ತಗಳ ಸಮಸ್ಯೆಯಿಂದ
ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವೆಂಕಟೇಶ್ .ಎಂ. ರಾಠೋಡ
ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಜುಮಾಲಾಪುರ್ ತಾಂಡದಲ್ಲಿ ಶುಕ್ರವಾರ ನೆರವೇರಿತು.

ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಬಿಳಿರಕ್ತ ಕಣಗಳು ಕಡಿಮೆ ಕಡಿಮೆಯಾಗಿರುವ ಸಮಸ್ಯೆಯಿಂದ ಯೋಧ ಮೃತಪಟ್ಟಿದ್ದು

ಮೃತರ ಪಾರ್ಥಿವ ಶರೀರವು ಗುರುವಾರ ಮದ್ಯ ರಾತ್ರಿ ಬಾಗಲಕೋಟ ಆಸ್ಪತ್ರೆಯಿಂದ ತರಲಾಗಿತ್ತು ಶುಕ್ರವಾರ ಬೆಳಿಗ್ಗೆ ಜುಮಾಲಾಪುರ್ ತಾಂಡಕ್ಕೆ ಭವ್ಯ ಮೆರವಣಿಗೆ ಹೊಂದಿಗೆ ರಸ್ತೆ ಮೂಲಕ ಆಂಬುಲೆನ್ಸ್‌ ವಾಹನದಲ್ಲಿ ತರಲಾಯಿತು.

ನಾರಾಯಣಪುರದಿಂದ ಸುಮಾರ 15 ಕಿ.ಮೀ ದೂರವಿರುವ ಯೋಧನ ಸ್ವಗ್ರಾಮ ಜುಮಾಲಾಪುರ್ ತಾಂಡವರೆಗೆ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ಉದ್ದಗಲಕ್ಕೂ ವೆಂಕಟೇಶ ಅಮರ ರಹೇ, ಬೋಲೊ ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಮಾಜಿ ಸೈನಿಕರು, ಯುವಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮೃತ ಯೋಧನ ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮೀಡಿದರು.

ಸಾರ್ವಜನಿಕರಿಗೆ ಯೋಧನ ಅಂತಿಮ ದರ್ಶನಕ್ಕೆ ಸ್ವಗ್ರಾಮದ ಹೊರವಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಹುಣಸಗಿ ತಹಶೀಲ್ದಾರರ ಹುಸೇನಾ.ಎ. ಸರ್ಕಾವಾಸ್, ಕೊಡೇಕಲ್ ಉಪ ತಹಶೀಲ್ದಾರರ ಕಾಲಪ್ಪ ಜಂಜಿಗಡ್ಡಿ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ, ಹುಣಸಗಿ ಪೊಲೀಸ್ ಸಿ.ಪಿ.ಐ ರವಿಕುಮಾರ್ , ಕೊಡೇಕಲ್ ಪಿ.ಎಸ್.ಐ ಅಯ್ಯಣ್ಣ ನವರು ಪೊಲೀಸ್ ಬಂದೋಬಸ್ತಾ ನೀಡಿದರು ಜೊತೆಯಲ್ಲಿ
ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ವೆಂಕಟೇಶ ಎಂ ರಾಠೋಡ ಅವರ ಅಂತ್ಯಕ್ರಿಯೆ ನೆರವೇರಿತು.

ವರದಿಗಾರ : ಶಿವು ರಾಠೋಡ

ಹೆಚ್ಚಿನ ಸುದ್ದಿ