Thursday, March 5, 2026
Homeಜಿಲ್ಲಾ ಸುದ್ದಿಗಳುಹಾಲಸಾಗರ : ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್...

ಹಾಲಸಾಗರ : ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್

ಕೂಡ್ಲಿಗಿ ಮಾ 4 : ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ​ಹಾಲಸಾಗರ ಗ್ರಾಮದ , ಕುರಿಗಾಯಿ ಓಬಯ್ಯ. ಕೆಲ ದಿನಗಳ ಹಿಂದೆಯಷ್ಟೆ , ತನ್ನ ಕುರಿ ಕಾಯಲು ತೆರಳಿದ ಸಂದರ್ಭದಲ್ಲಿ. ಆಕಸ್ಮಿಕವಾಗಿ ಕರಡಿ ದಾಳಿಗೆ ತುತ್ತಾಗಿದ್ದ , ಪರಿಣಾಮ ಓಬಣ್ಣನ ಕುಟುಂಬವು ಶೋಕ ಸಾಗರದಲ್ಲಿ ಮಿಂದಿತ್ತು. ಅಲ್ಲದೇ ಈ ಘಟನೆ ಇಡೀ ವಲಯನ್ನು ಬೆಚ್ಚಿಬೀಳಿಸಿತ್ತು , ಕುಟುಂಬದ ಆಧಾರಸ್ತಂಭವಾಗಿದ್ದ ಪತಿ ಓಬಣ್ಣನನ್ನು ಕಳೆದುಕೊಂಡ. ಆತನ ಮಡದಿ ಅಂಜಿನಮ್ಮ ಮತ್ತು ಮಕ್ಕಳ ನೋವಿಗೆ ಸ್ಪಂದಿಸಿದ್ದು , ಕ್ಷೇತ್ರ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಹಾಗೂ ಅವರ ತಂಡದವರು. ಶಾಸಕರು ಮಾ 3 ರವರೆಗೆ ಅಂದರೆ ಕೆಲ ದಿನಗಳ ವರೆಗೆ , ಪಕ್ಷ ನೀಡಿದ್ದ ಜವಾಬ್ದಾರಿ ನಿಭಾಯಿಸುವ ಕಾರಣಕ್ಕಾಗಿ. ಅನಿವಾರ್ಯವಾಗಿ ನೆರೆ ರಾಜ್ಯಕ್ಕೆ ತೆರಳಿದ್ದರು , ಕ್ಷೇತ್ರದಲ್ಲಿ ಘಟನೆ ಜರುಗಿದ ಮಾಹಿತಿ ಪಡೆದ ತಕ್ಷಣ ಅವರು. ನೋವಿನ ಮಡುವಿನಲ್ಲಿ ಮಿಂದಿದ್ದ ಮೃತನ ಕುಟುಂಬವನ್ನು , ದೂರವಾಣಿ ಮೂಲಕ ಸಂಪರ್ಕಸಿ ಸಾಂತ್ವಾನ ಹೇಳಿದ್ದಾರೆ ಧೈರ್ಯ ತುಂಬಿದ್ದಾರೆ. ಮತ್ತು ನೊಂದ ಕುಟುಂಬಕ್ಕೆ ಅಗತ್ಯ ನೆರವು ನೀಡಲು , ತಮ್ಮ ತಂಡವನ್ನು ನಿಯೋಜಿಸಿದ್ಫಾರೆ. ಈ ಮೂಲಕ ನೊಂದ ಕುಟುಂವದ ಕಣ್ಣೀರೊರೆಸಿದ್ದಾರೆ ಶಾಸಕರು. ಮತ್ತು ಅವರು ಬುಧವಾರ ಹಾಲಸಾಗರ ಗ್ರಾಮಕ್ಕೆ , ಖುದ್ದು ಭೇಟಿ ನೀಡಿದ್ದು ಮೃತನ ಕುಟುಂಬಕ್ಕೆ ವೈಯಕ್ತಿಕ ಅಗತ್ಯ ನೆರವು ನೀಡಿದ್ದಾರೆ.
​ಕೇವಲ ಸಾಂತ್ವನಕ್ಕೆ ಸೀಮಿತವಾಗದ ಶಾಸಕರು, ಅರಣ್ಯ ಇಲಾಖೆಯಿಂದ 20 ಲಕ್ಷ ₹ ಪರಿಹಾರದ ಚೆಕ್ ವಿತರಿಸಿದ್ದಾರೆ. ತಮ್ಮ ವೈಯಕ್ತಿಕ ವೇತನದಿಂದ 50 ಸಾವಿರ ₹. ನಗದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು 4 ಸಾವಿರ ₹ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಈ ಮೂಲಕ ಮಾನವೀಯತೆ ಮರೆದಿದ್ದು , ಹೃದಯ ಶ್ರೀಮಂತರಾಗಿದ್ದಾರೆ ಆಶ್ರಯದಾತರಾಗಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಫ್ ಅನುಪಮ, ಎಸಿಎಫ್ ಭಾಸ್ಕರ್ ಸೇರಿದಂತೆ. ಗ್ರಾಮಸ್ಥರು , ಗ್ರಾಮದ ಮುಖಂಡರು , ಹಿರಿಯರು , ಗಣ್ಯರು ಉಪಸ್ಥಿತರಿದ್ದರು.

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428

ಹೆಚ್ಚಿನ ಸುದ್ದಿ