ರಾಮನಗರ: ರಾಜ್ಯ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಈ ನಡುವೆ, ದಾಖಲೆಗಳಿಲ್ಲದೆ ಎಟಿಎಮ್ ಕಿಯಾಸ್ಕ್ ಗಳಿಗೆ ಹಣ ತುಂಬಿಸಲು ನೋಟಿನ ಕಂತೆಗಳನ್ನು ಸಾಗಿಸುತ್ತಿದ್ದ 2 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಾಮನಗರದ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಗಂಟಕನದೊಡ್ಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಬಳಿ, ವಾಹನವೊಂದರಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ಪತ್ತೆಯಾಗಿದೆ. ಚುನಾವಣಾಧಿಕಾರಿಗಳು ವಿಚಾರಿಸಿದಾಗ, ಎಟಿಎಮ್ ಕಿಯಾಸ್ಕ್ ಗಳಿಗೆ ಹಣ ತುಂಬಿಸಲು ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಹಣ ಸಾಗಿಸುತ್ತಿದ್ದವರು ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ, ವಾಹನದಲ್ಲಿ ಗನ್ ಮ್ಯಾನ್ ಇರಲಿಲ್ಲ. ಅಲ್ಲದೇ, ಹಣ ಸಾಗಣೆಗೆ ಸೂಕ್ತ ದಾಖಲೆಗಳಿರಲಿಲ್ಲ. ಹೀಗಾಗಿ ಚುನಾವಣಾಧಿಕಾರಿಗಳು ಹಣ ಹಾಗೂ ಹಣ ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.
