Friday, October 10, 2025
Homeದೇಶಕಳ್ಳಭಟ್ಟಿ ಸಾರಾಯಿ ಸೇವಿಸಿ 20 ಮಂದಿ ಮೃತ್ಯು

ಕಳ್ಳಭಟ್ಟಿ ಸಾರಾಯಿ ಸೇವಿಸಿ 20 ಮಂದಿ ಮೃತ್ಯು

ಬಿಹಾರ: ಕಳ್ಳಭಟ್ಟಿ ಮದ್ಯ ಸೇವಿಸಿದ ಪರಿಣಾಮ 20 ಮಂದಿ ಮೃತಪಟ್ಟು, ಹಲವರು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗಂಭೀರಾವಸ್ಥೆಯಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳಭಟ್ಟಿ ಸಾರಾಯಿ ತುಂಬಿದ್ದ ಟ್ಯಾಂಕ್ ಅನ್ನು ಮೋತಿಹಾರಿಗೆ ತರಲಾಯಿತು ಮತ್ತು ಅದನ್ನು ಸ್ಥಳೀಯ ವ್ಯಾಪಾರಿಗಳಿಗೆ ವಿತರಿಸಲಾಗಿತ್ತು ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಕಳ್ಳಭಟ್ಟಿಯ ಭೀಕರ ಪರಿಣಾಮದ ಕಾರಣದಿಂದ 2016ರಿಂದ ಬಿಹಾರ ಸರ್ಕಾರವು ರಾಜ್ಯದಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ನಿಷೇಧಿಸಿತ್ತು.

ರಾಜ್ಯ ಅಬಕಾರಿ ಇಲಾಖೆ ಈ ವರ್ಷದ ಫೆಬ್ರವರಿಯಲ್ಲಿ 15 ಜನರನ್ನು ಬಂಧಿಸಿದ್ದು, ಅವರಲ್ಲಿ ಎಂಟು ಮಂದಿ ಮದ್ಯ ವ್ಯಾಪಾರಿಗಳು. ಇವರಿಂದ ದೇಶಿ ಮತ್ತು ವಿದೇಶಿ ಬ್ರಾಂಡ್‌ನ ಮದ್ಯವನ್ನೂ ಇಲಾಖೆ ವಶಪಡಿಸಿಕೊಂಡಿದೆ. ಮದ್ಯ ಮಾರಾಟ ನೀತಿಯ ಹೊರತಾಗಿಯೂ ಬಿಹಾರದಲ್ಲಿ ಕಳ್ಳಭಟ್ಟಿ ಸಾರಾಯಿ ದುರಂತಗಳು ನಡೆಯುತ್ತಲೇ ಇದೆ.

ಹೆಚ್ಚಿನ ಸುದ್ದಿ