Monday, July 7, 2025
Homeವಿದೇಶಸುಡಾನ್ ನಲ್ಲಿ ಆಂತರಿಕ ಯುದ್ಧ: 200 ಸಾವು, 1800 ಮಂದಿಗೆ ಗಾಯ

ಸುಡಾನ್ ನಲ್ಲಿ ಆಂತರಿಕ ಯುದ್ಧ: 200 ಸಾವು, 1800 ಮಂದಿಗೆ ಗಾಯ

ನವದೆಹಲಿ: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ನಡುವಿನ ಯುದ್ಧದಲ್ಲಿ ಇದುವರೆಗೆ 200 ಜನರು ಮೃತಪಟ್ಟು , 1800 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೂರು ದಿನಗಳ ನಿರಂತರ ದಾಳಿಯಿಂದ ಸುಡಾನ್ ನಲ್ಲಿ ಆಸ್ಪತ್ರೆಗಳು ಹಾನಿಗೊಳಗಾಗಿದ್ದರೆ, ಆಹಾರ ಮತ್ತು ವೈದ್ಯಕೀಯ ಸರಬರಾಜು ಕೊರತೆಯನ್ನು ಎದುರಿಸುತ್ತಿದೆ.

ಕದನ ವಿರಾಮಕ್ಕಾಗಿ ಪ್ರಾದೇಶಿಕ ಮತ್ತು ಜಾಗತಿಕ ಕರೆಗಳ ಹೊರತಾಗಿಯೂ, ದಾಳಿ ಪ್ರತಿದಾಳಿ ಇನ್ನೂ ಮುಂದುವರಿದಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 200 ಎನ್ನಲಾಗಿದೆ.

ಪವಿತ್ರ ರಮಝಾನ್ ತಿಂಗಳಲ್ಲಿ ಮನೆಯಿಂದ ಹೊರಗೆ ಕಾಲಿಡಲಾಗದ ಪರಿಸ್ಥಿತಿಯಲ್ಲಿ ಸುಡಾನ್ ನಿವಾಸಿಗಳಿದ್ದು, ಭಯಭೀತಿಯಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಸುದ್ದಿ