Saturday, June 27, 2026
Homeಚುನಾವಣೆ 2023ಸವದಿಗೆ ಬಿಜೆಪಿಯಲ್ಲಿ ಅನ್ಯಾಯವಾಗಿಲ್ಲ: ರವಿಕುಮಾರ್

ಸವದಿಗೆ ಬಿಜೆಪಿಯಲ್ಲಿ ಅನ್ಯಾಯವಾಗಿಲ್ಲ: ರವಿಕುಮಾರ್

ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆ ಕುರಿತಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕಿಸಿದ್ದಾರೆ.

ಸವದಿ ಯಾವುದೋ ಬೇಜಾರಿನಿಂದ ಕಾಂಗ್ರೆಸ್‌ಗೆ ಹೋಗಿದ್ದಾರೆ. ನಮ್ಮ  ಪಕ್ಷ ಲಕ್ಷ್ಮಣ ಸವದಿಯವರಿಗೆ ಒಂದು ಗುಲಗಂಜಿಯಷ್ಟೂ ಅನ್ಯಾಯ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಲಕ್ಷ್ಮಣ ಸವದಿಯವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಅವರಿಗೆನೋ ಬೇರೆ ಕಾರಣಗಳಿಂದ ಸಿಟ್ಟು ಬಂದಿದ್ದು, ಸೀಟ್ ಸಿಗಲಿಲ್ಲ ಎಂದು ಹೋಗಿದ್ದಾರೆ. ಬಿಜೆಪಿ ಅವರ ಪಾರ್ಟಿಯಾಗಿತ್ತು ಎಂದು ಹೇಳಿದ್ದಾರೆ.

ಅಥಣಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಣ್‌ ಸವದಿಗೆ ಟಿಕೆಟ್‌ ಲಭಿಸದ ಬೇಸರದಲ್ಲಿ ಅವರು ತಮ್ಮ ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್‌ ಸೇರ್ಪಡೆಯಾದ ಸವದಿಗೆ ಕಾಂಗ್ರೆಸ್‌ ಅಥಣಿ ಕ್ಷೇತ್ರದ ಟಿಕೆಟ್‌ ನೀಡಿದೆ.

ಹೆಚ್ಚಿನ ಸುದ್ದಿ