ನ್ಯೂಯಾರ್ಕ್: ಹುಟ್ಟುಹಬ್ಬ ಪಾರ್ಟಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು , ಹಲವರು ಗಾಯಗೊಂಡಿರುವ ಘಟನೆ ಅಮೆರಿಕದ ಅಲಬಾಮಾದಲ್ಲಿ ನಡೆದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಹದಿಹರೆಯದವರು ಎನ್ನಲಾಗಿದೆ.
ರಾತ್ರಿ 10.30ರ ನಂತರ ದಾಳಿ ನಡೆದಿದೆ ಎನ್ನಲಾಗಿದೆ. ಹುಟ್ಟುಹಬ್ಬವನ್ನು ಪಾರ್ಟಿಗೆ ಸಾಕಷ್ಟು ಜನರು ಆಗಮಿಸಿದ್ದು, ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.
ಈ ದಾಳಿಯ ಹಿಂದಿರುವವರು ಯಾರು? ಅವರ ಉದ್ದೇವೇನು ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.