ಕಡೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತಾ ವಿರುದ್ಧ 41 ಚೆಕ್ಬೌನ್ಸ್ ಕೇಸ್ಗಳು ದಾಖಲಾಗಿದೆ ಎಂದು ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ, ಹೊರ ರಾಜ್ಯಗಳಲ್ಲಿ ದತ್ತಾ ವಿರುದ್ಧ 2014ರಿಂದ 2023ರವರೆಗೆ 41 ಚೆಕ್ಬೌನ್ಸ್ ಪ್ರಕರಣ ದಾಖಲಾಗಿರುವ ಬಗ್ಗೆ ವೈಎಸ್ವಿ ದತ್ತಾ ಮಾಹಿತಿ ನೀಡಿದ್ದಾರೆ.
ಶೃಂಗೇರಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಬಳಿ 8 ಲಕ್ಷ ರೂ. ಸಾಲ ಪಡೆದಿರುವುದಾಗಿ ತಿಳಿಸಿರುವ ದತ್ತಾ, ತನಗೆ ಒಟ್ಟು 93.19 ಲಕ್ಷ ರೂ. ಸಾಲ ಇರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ದತ್ತಾ, ಕಾಂಗ್ರೆಸ್ ಟಿಕೆಟ್ ನೀಡದ ಅಸಮಾಧಾನದಲ್ಲಿ ಮರಳಿ ಜೆಡಿಎಸ್ ಸೇರಿದ್ದಾರೆ.
