Monday, October 13, 2025
Homeಟಾಪ್ ನ್ಯೂಸ್4% ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

4% ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆಇಂದುದ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು ಏ.18ರ ವರೆಗೆ ಹೊಸ ಮೀಸಲಾತಿ ಪದ್ದತಿ ಅನ್ವಯ ನೇಮಕಾತಿ, ಪ್ರವೇಶಾತಿ ಮಾತುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.

ಮುಸ್ಲಿಂ ಸಮುದಾಯದ 4% ಮೀಸಲಾತಿ ರದ್ದು ಮಾಡಿದ್ದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನ್ಯಾ. ಕೆ.ಎಂ ಜೋಸೆಫ್ ಹಾಗೂ ನ್ಯಾ. ಬಿ.ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಹಿರಿಯ ವಕೀಲರ ದಾಖಲೆಗಳನ್ನು ಪರಿಶೀಲೀಸಿ ಸರ್ಕಾರದ ನಿರ್ಧಾರ ತಪ್ಪಾದ ಊಹೆಯಾಗಿದೆ. ಅರ್ಜಿಯ ಎಲ್ಲಾ ನ್ಯೂನತೆಗಳನ್ನು ತೆಗೆದುಹಾಕಲಾಗಿದ್ದು, ಏ.18ರಂದು ಅರ್ಜಿ ವಿಚಾರಣೆಗೆ ಅನುಮತಿ ನೀಡಿದೆ.

ಹೆಚ್ಚಿನ ಸುದ್ದಿ