Saturday, June 27, 2026
Homeಟಾಪ್ ನ್ಯೂಸ್ತುಮಕೂರು ಬಳಿ ಭೀಕರ ರಸ್ತೆ ಅಪಘಾತ : 5 ಬಲಿ

ತುಮಕೂರು ಬಳಿ ಭೀಕರ ರಸ್ತೆ ಅಪಘಾತ : 5 ಬಲಿ

ತುಮಕೂರು: ಖಾಸಗಿ ಬಸ್ ಹಾಗೂ ಇನೋವಾ ಕಾರು ಭೀಕರ ಅಪಘಾತ ಸಂಭವಿಸಿದ್ದು, ದಂಪತಿ, ಒಂದು ಮಗು ಸೇರಿ ಐವರು ಮೃತಪಟ್ಟಿರುವ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ ನಡೆದಿದೆ.

ಗೋವಿಂದ ನಾಯಕ (58), ತಿಪ್ಪಮ್ಮ, (52) ದಂಪತಿ ಮೃತರಾಗಿದ್ದು ಇನ್ನುಳಿದವರ ಗುರುತು, ವಿಳಾಸ ಪತ್ತೆಯಾಗಿಲ್ಲ. ಮೂಲತಃ ಚಳ್ಳಕೆರೆ ತಾಲೂಕಿನ ನಿವಾಸಿಗಳಾದ ಗೋವಿಂದ ನಾಯಕ ದಂಪತಿ ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ರು.

ಬೆಂಗಳೂರಿನಿಂದ ಚಳ್ಳಕೆರೆಗೆ ತೆರಳುತ್ತಿದ್ದ ಇನೋವಾ ಕಾರ್‌ಗೆ ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದ್ದು ಮೃತರ ಕಳೇಬರವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ತುಮಕೂರು ಎಎಸ್ ಪಿ ಮರಿಯಪ್ಪ ಹಾಗೂ ಕ್ಯಾತಸಂದ್ರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ

ಹೆಚ್ಚಿನ ಸುದ್ದಿ