Tuesday, July 8, 2025
Homeಟಾಪ್ ನ್ಯೂಸ್ಭೀಕರ ರಸ್ತೆ ಅಪಘಾತ : ಮಗು ಸಹಿತ 6 ಮಂದಿ ದಾರುಣ ಸಾವು

ಭೀಕರ ರಸ್ತೆ ಅಪಘಾತ : ಮಗು ಸಹಿತ 6 ಮಂದಿ ದಾರುಣ ಸಾವು

ಕೊಡಗು: ಸಂಪಾಜೆ ಪೇಟೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು 6 ಮಂದಿ ಮೃತರಾಗಿದ್ದಾರೆ. ಕಾರು ಮತ್ತು ಸರಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಗಂಡಸು ಸೇರಿ 6 ಮಂದಿ ಮೃತಪಟ್ಟಿದ್ದಾರೆ.

ಸಂಪಾಜೆ ಪೇಟೆಯ ಪೆಟ್ರೋಲ್ ಬಂಕ್‌ ಬಳಿ ಮದ್ಯಾಹ್ನ ಸುಮಾರು 1 ಗಂಟೆಗೆ ಈ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ., ಉಳಿದವರು ಆಸ್ಪತ್ರೆಯಲ್ಲಿ ಕೊಯುಸಿರೆಳೆದಿದ್ದಾರೆ. ಮೃತರು ಮಂಡ್ಯ ಮೂಲದವರೆಂದು ತಿಳಿದುಬಂದಿದ್ದು ಅವರುಗಳ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

ಹೆಚ್ಚಿನ ಸುದ್ದಿ