ನ್ಯೂಯಾರ್ಕ್: ಆಘಾತಕಾರಿ ಘಟನೆಯೊಂದರಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ 6 ಶಿಕ್ಷಕಿಯರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಈ ಶಿಕ್ಷಕರು ವಿವಿಧ ಸಂದರ್ಭಗಳಲ್ಲಿ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು ಎನ್ನಲಾಗಿದೆ.
ಡ್ಯಾನ್‌ವಿಲ್ಲೆಯ ಎಲ್ಲೆನ್ ಶೆಲ್ ಎಂಬ 38 ವರ್ಷದ ಶಿಕ್ಷಕಿ, 16 ವರ್ಷ ವಯಸ್ಸಿನ ಇಬ್ಬರು ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದರು ಎನ್ನುವ ಆರೋಪ ಹೊರಿಸಲಾಗಿದೆ. ಗುರುವಾರ ಆಕೆಯನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಪ್ರಾಪ್ತ ಬಾಲಕರ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕನಿಷ್ಠ ಆರು ಮಹಿಳಾ ಶಿಕ್ಷಕರ ಪ್ರಕರಣಗಳು ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಈ ಎಲ್ಲ ಪ್ರಕರಣಗಳಲ್ಲಿ ಶಿಕ್ಷಕಿಯರು ತಮ್ಮ ವಿದ್ಯಾರ್ಥಿಗಳನ್ನೇ ಬಳಸಿಕೊಂಡಿದ್ದಾರೆ. ಶಾಲೆಯ ಹೊರಗೆ ಅಥವಾ ಹೊರಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.