Friday, July 3, 2026
Homeಆಧ್ಯಾತ್ಮವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ: ಪ್ರಮೋದ ನಾಯ್ಕ.

ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ: ಪ್ರಮೋದ ನಾಯ್ಕ.

ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ: ಪ್ರಮೋದ ನಾಯ್ಕ.

ಕಾರವಾರ:- ಶರಣರ ಕಾಲಘಟ್ಟದಲ್ಲಿ ರಚನೆಯಾಗಿ ನಂತರದ ದಿನಗಳಲ್ಲಿ ನಾನಾ ಭಾಗಗಳಲ್ಲಿ ಚದುರಿ ಹೋಗಿ ಗೆದ್ದಲು ಪಾಲಾಗುತ್ತಿದ್ದ ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ. ಅವರ ಈ ಅನನ್ಯ ಸೇವೆಯನ್ನು ಸ್ಮರಿಸಿ ಸರ್ಕಾರವು ಜುಲೈ 2 ರಂದು ಅವರ ಜನ್ಮದಿನವನ್ನು ಅಧಿಕೃತವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಚುನಾವಣೆ ಶಾಖೆ ತಹಶೀಲ್ದಾರ ಪ್ರಮೋದ ನಾಯ್ಕ ಹೇಳಿದರು.

ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆದ ಡಾ.ಫ.ಗು.ಹಲಕಟ್ಟಿ ಅವರ ಜನ್ಮ ದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.

ಇಂದು ನಮಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳ ವಚನಗಳು ಓದಲು ಸಿಗುತ್ತಿರುವುದರ ಹಿಂದೆ ಡಾ.ಫ.ಗು.ಹಲಕಟ್ಟಿ ಅವರ ಇಡೀ ಜೀವನದ ತಪಸ್ಸಿದೆ. ಸಾಹಿತ್ಯದ ಅಧ್ಯಯನಕ್ಕೆ ಹೊಸ ಹಾದಿ ತೋರಿಸಿದ ಈ ಮಹಾನ್ ಚೇತನಕ್ಕೆ ನಾಡು ಸದಾ ಋಣಿಯಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನಾಯ್ಕ ಮಾತನಾಡಿ ವಚನ ಪಿತಾಮಹ ಡಾ.ಫ.ಗು.ಹಲಕಟ್ಟಿಯವರ ಜೀವನ ಚರಿತ್ರೆ ಮತ್ತು ಸಾಧನೆ ಇಂದಿನ ಪೀಳಿಗೆಗೆ ಪ್ರಸ್ತುತವಾಗಿದೆ. ವಚನಗಳ ಮೂಲಕ ಜಗತ್ತಿಗೆ ಶ್ರೇಷ್ಠ ಸಾಹಿತ್ಯವನ್ನು ಪರಿಚಯಿಸಿದ ಅವರ ನೆನಪುಗಳನ್ನು ಇಂತಹ ಜಯಂತಿಗಳ ಮೂಲಕ ಸರ್ಕಾರವು ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಜ್ಞಾನವನ್ನು ಶಾಲಾ-ಕಾಲೇಜುಗಳ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿದರೆ ಅವರಲ್ಲಿ ಸಾಹಿತ್ಯದ ಅರಿವು ಮೂಡಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯದರ್ಶಿ ಡಾ.ಗಣೇಶ ಬಿಷ್ಟಣ್ಣನವರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ. ಫ. ಗು. ಹಲಕಟ್ಟಿ ಅವರ ಆದರ್ಶ ಜೀವನ ಹಾಗೂ ವಚನ ಸಾಹಿತ್ಯದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಗೆದ್ದಲು ಪಾಲಾಗುತ್ತಿದ್ದ ಶರಣರ ಅಮೂಲ್ಯ ವಚನಗಳನ್ನು ಸಂರಕ್ಷಿಸಿ ನಾಡಿಗೆ ನೀಡಿದ ವಚನ ಪಿತಾಮಹ ಹಲಕಟ್ಟಿಯವರ ಜನ್ಮದಿನವನ್ನು ಈ ಮೂಲಕ ಕೃತಜ್ಞತೆ ಸ್ಮರಿಸಲಾಗಿತ್ತಿದೆ ಎಂದರು.

ವಚನಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗಾಗಿ ಹಲಕಟ್ಟಿಯವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟರು. ವಚನಗಳನ್ನು ಪುಸ್ತಕ ರೂಪದಲ್ಲಿ ತರಲು ಅವರು ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ ಸಾಹಿತ್ಯದ ಉದ್ಧಾರಕ್ಕೆ ನಿಂತ ಅಪರೂಪದ ಶರಣರಾಗಿದ್ದಾರೆ.
ಸೈಕಲ್ ತುಳಿಯುತ್ತಾ, ಎಲ್ಲೆಲ್ಲಿಯೋ ಬಿದ್ದಿದ್ದ ತಾಳಗೇರಿ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಷ್ಕರಿಸಿ ಶೂನ್ಯ ಸಂಪಾದನೆ ಹಾಗೂ ಶಿವಾನುಭವ ಮಾಸಿಕ ಪತ್ರಿಕೆಯ ಮೂಲಕ ಪ್ರಕಟಿಸಿ ಇಂದಿನ ತಲೆಮಾರಿಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ, ಸ್ಟಾರ್ ಚಾಯ್ಸ್ ಸಂಸ್ಥೆಯ ಅಧ್ಯಕ್ಷ ರವಿದಾಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಭಿಷೇಕ ಕಳಸ ನಿರೂಪಿಸಿ, ವಂದಿಸಿದರು.

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ