Monday, July 7, 2025
Homeಟಾಪ್ ನ್ಯೂಸ್ಹೊಸ ಆಗಮನಕ್ಕಾಗಿ ಕಾಯ್ತಿದೆ ಸ್ಯಾಂಡಲ್‌ವುಡ್‌ನ ಸಿಂಹಪ್ರಿಯಾ ಜೋಡಿ !!!

ಹೊಸ ಆಗಮನಕ್ಕಾಗಿ ಕಾಯ್ತಿದೆ ಸ್ಯಾಂಡಲ್‌ವುಡ್‌ನ ಸಿಂಹಪ್ರಿಯಾ ಜೋಡಿ !!!

ಚಂದನವನದ ಚಿಟ್ಟೆ ವಸಿಷ್ಠ ಸಿಂಹ ಜೀವನದಲ್ಲಿ ಚಿಟ್ಟೆಯ ಎಂಟ್ರಿ ಆಗ್ತಿದೆಯಂತೆ ಎಂದು ಸಿಂಹಪ್ರಿಯಾ ಪ್ರೇಮದ ಕಥೆಯನ್ನು ಫ್ಯಾನ್ಸ್ ಮಾತಾಡಲು ಶುರು ಮಾಡುವಷ್ಟರಲ್ಲೇ ಈ ಜೋಡಿ ಮದುವೆ ಡೇಟ್ ಅನೌನ್ಸ್ ಮಾಡಿತ್ತು

ಇದೀಗ ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲೊಂದು ಗೊಂದಲಮಯ ಪೋಸ್ಟ್‌ ಹಾಕಿ ಅಭಿಮಾನಿಗಳ ತಲೆಕೆಡಿಸಿದ್ದಾರೆ.  

ನಟಿ ಹರಿಪ್ರಿಯಾರವರ ಇನ್ಸ್ಟಾಗ್ರಾಮ್ ಪೋಸ್ಟ್‌

ಮೊಬೈಲ್‌ಗೆ ನೋಟಿಫಿಕೇಶನ್ ಬರುವ ರೀತಿ ಡಿಸೈನ್ ಮಾಡಿರುವ ಫೋಟೊವೊಂದನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ.‌ ಹೊಸ ಜೀವನ, ಹೊಸ ಆಗಮನ, ಹೊಸ ಕರ್ತವ್ಯ, ಹೊಸ ಆರಂಭ ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಸಹ ಬರೆದುಕೊಂಡಿರುವ ಹರಿಪ್ರಿಯಾ ಪರೋಕ್ಷವಾಗಿ ಹೊಸ ಸದಸ್ಯನ ಆಗಮನವಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಈ ಜೋಡಿ ತಂದೆ – ತಾಯಿಗಳಾಗುತ್ತಿದ್ದಾರಂತೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡದ ಜೋಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್‌ ಹಾಕಿ ಸಿಹಿ ಸುದ್ದಿ ನೀಡುವ ಸುಳಿವು ನೀಡಿದ್ದಾರೆ. ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ವಿಷಯವೇನೆಂದು ತಿಳಿಯಲು ನೀವು ಕುತೂಹಲಕ್ಕೊಳಗಾಗಿದ್ದೀರ ಎಂಬುದು ತಿಳಿದಿದೆ, ನಾನು ವಿಷಯವೇನೆಂದು ಹೇಳುವ ಮುನ್ನ ನೀವು ಅದನ್ನು ಊಹಿಸಲು ಯತ್ನಿಸಿ ಎಂದು ಬರೆದುಕೊಂಡಿದ್ದಾರೆ‌.

ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ ವಿವಾಹವಾಗಿ, ಜನವರಿ 28ರಂದು ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದ ಜೋಡಿ ಹೊಸ ಆಗಮನವಾಗ್ತಿದೆ ಎಂದು ಕುತೂಹಲಕಾರಿ ಪೋಸ್ಟ್‌ ಹಂಚಿಕೊಂಡಿದೆ.

ಇವರ ಬಾಳಲ್ಲಿ ಏನೇ ಹೊಸ ಆಗಮನವಾಗ್ತಿದ್ರೂ ಇವರ ಬಾಳಿನ ಪ್ರತೀ ಹೆಜ್ಜೆಯೂ ವಿಜಯದ ಹಾದಿಯಲ್ಲೇ ಸಾಗಲಿ ಎಂದು ಹಾರೈಸೋಣ

ಹೆಚ್ಚಿನ ಸುದ್ದಿ