Saturday, April 18, 2026
Homeಟಾಪ್ ನ್ಯೂಸ್ಮೈಸೂರಿನಲ್ಲಿ ಪಂಚರತ್ನ ಸಮಾರೋಪ: ಜನಸ್ತೋಮ ಕಂಡು ಭಾವುಕರಾದ ಹೆಚ್‌ಡಿಡಿ

ಮೈಸೂರಿನಲ್ಲಿ ಪಂಚರತ್ನ ಸಮಾರೋಪ: ಜನಸ್ತೋಮ ಕಂಡು ಭಾವುಕರಾದ ಹೆಚ್‌ಡಿಡಿ

ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಜೆಡಿಎಸ್‌ ಆಯೋಜಿಸಿದ್ದು, ಲಕ್ಷಾಂತರ ಜೆಡಿಎಸ್‌ ಕಾರ್ಯಕರ್ತರು ಸಾಂಸ್ಕೃತಿಕ ನಗರಿಗೆ ಬಂದು ತಲುಪಿದ್ದರು.

ಸುಡುವ ಬಿಸಿಲನ್ನು ಲೆಕ್ಕಿಸದೇ ಸೇರಿದ್ದ ಲಕ್ಷಾಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್‌ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಪರ ಜಯಘೋಷ ಹಾಕಿದ್ದು, ಪಕ್ಷದ ಬಾವುಟಗಳು ಹಾರಾಡಿದವು.

ವೇದಿಕೆಯಲ್ಲಿ ನಿರ್ಮಾಣಗೊಂಡಿದ್ದ ರ್‍ಯಾಂಪ್ ನಲ್ಲಿ ಅನಾರೋಗ್ಯದ ಕಾರಣ ಗಾಲಿ ಕುರ್ಚಿಯಲ್ಲಿ ಕುಳಿತಿ ಎಚ್.ಡಿ.ದೇವೇಗೌಡ ಜನರತ್ತ ಕೈಬೀಸಿದ್ದು, ಅವರೊಂದಿಗೆ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಹೆಜ್ಜೆ ಹಾಕಿದ್ದಾರೆ. ತಮಗಾಗಿ ಸೇರಿದ್ದ ಜನಸ್ತೋಮ ಕಂಡ ದೇವೇಗೌಡ ಅವರು ಭಾವುಕರಾದರು. ದೇವೇಗೌಡರ ರ್ಯಾಂಪ್ ರ್ಯಾಲಿ ಬಳಿಕ ಕುಮಾರಸ್ವಾಮಿ ಕೂಡಾ ಭಾವುಕರಾದರು.

ನಾನು ರಾಜಕೀಯದಲ್ಲಿ ಬೇರೂರಿದ್ದು, ನಿಮ್ಮಿಂದ ಮತ್ತು ದೇವರಿಂದ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಕೈಬಿಡದೆ ಕಾಪಾಡಿದ್ದು ಎರಡು ಶಕ್ತಿಗಳು.ಎರಡು ಶಕ್ತಿಗಳಿಗೆ ನಾನು ವಂದಿಸುತ್ತೇನೆ. ನನಗೆ ಇತ್ತೀಚೆಗೆ ಆರೋಗ್ಯ ಸಮಸ್ಯೆ ಇತ್ತು. ಆ ಪರಮಾತ್ಮ ತಕ್ಕಮಟ್ಟಿಗೆ ಚೇತರಿಕೆ ನೀಡಿದ್ದಾನೆ ಎಂದು ದೇವೇಗೌಡ ಹೇಳಿದ್ರು.

ಹೆಚ್ಚಿನ ಸುದ್ದಿ