Saturday, April 18, 2026
Homeಟಾಪ್ ನ್ಯೂಸ್ಕಾಂಗ್ರೆಸ್ ಬಿಟ್ಟು ಹೋದವರೆಲ್ಲ ವಾಪಸ್ ಬರ್ತಾರೆ - ಚೆಲುವರಾಯಸ್ವಾಮಿ

ಕಾಂಗ್ರೆಸ್ ಬಿಟ್ಟು ಹೋದವರೆಲ್ಲ ವಾಪಸ್ ಬರ್ತಾರೆ – ಚೆಲುವರಾಯಸ್ವಾಮಿ

ವಲಸಿಗ ಸಚಿವರು ಮರಳಿ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ದಟ್ಟಾವಾಗುತ್ತಿದೆ. ಮೂಲ ಬಿಜೆಪಿಗರು vs ವಲಸಿಗರ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಹೊಸದಾಗಿ ಬಿಜೆಪಿ ಸೇರಿಕೊಂಡು ಅಧಿಕಾರ ಪಡೆದುಕೊಂಡಿರುವ ನಾಯಕರುಗಳಿಗೆ ಇರುಸು-ಮುರಿಸಾಗಿದ್ದು, ಹಲವು ಕಡೆ ಭಿನ್ನಮತ ಎದ್ದಿದೆ.

ಕಾಂಗ್ರೆಸ್‌ ಈ ಬಾರಿ ಭರ್ಜರಿ ತಯಾರಿ ನಡೆಸುತ್ತಿದ್ದು ಈಗಾಗಲೇ ಹಲವು ಬಿಜೆಪಿ, ಜೆಡಿಎಸ್‌ ಮುಖಂಡು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಚುನಾವಣೆ ಸನ್ನಿಹಿತವಾದ ಈ ಹೊತ್ತಲ್ಲಿ  ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17 ಶಾಸಕರು ಮತ್ತೆ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಹಾಲಿ ನಾಲ್ಕೈದು ಸಚಿವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ.

ಇದರ ಬೆನ್ನಲ್ಲೇ ಚೆಲುವರಾಯಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಚಿವರಾದ ಎಸ್‌ಟಿ ಸೋಮಶೇಖರ್‌, ಬೈರತಿ ಬಸವರಾಜ್‌ ಮೊದಲಾದವರು ಕಾಂಗ್ರೆಸ್‌ ಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರ ನಡುವೆ, ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್‌ ಕೂಡಾ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

  ಕಳೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಆಗಿತ್ತು ಎಂದು ಯೋಗೇಶ್ವರ್ ಏನಕ್ಕೆ ಹೇಳಿದ್ರು ಅಂತ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿಗೆ ಉಸಿರುಗಟ್ಟಿದ ವಾತಾವರಣ ಇದೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ