Saturday, June 27, 2026
Homeಚುನಾವಣೆ 2023ಕರ್ನಾಟಕಕ್ಕೆ ಬೇಕಿರುವುದು 40% ಸರಕಾರವಲ್ಲ, 100% ಬದ್ಧತೆಯ ಸರಕಾರ: ಶಶಿ ತರೂರ್

ಕರ್ನಾಟಕಕ್ಕೆ ಬೇಕಿರುವುದು 40% ಸರಕಾರವಲ್ಲ, 100% ಬದ್ಧತೆಯ ಸರಕಾರ: ಶಶಿ ತರೂರ್

ಬೆಂಗಳೂರು: ಕರ್ನಾಟಕದ ಜನರು 40 ಪರ್ಸಂಟ್ ಸರಕಾರದಿಂದ ಬೇಸತ್ತಿದ್ದು, ಅವರಿಗೆ 100 ಶೇಕಡಾ ಬದ್ಧತೆಯ ಸರಕಾರ ಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದರೆ ಬದ್ಧತೆಯಿಂದ ಕೆಲಸ ಮಾಡಲಿದೆ. ಈ ರಾಜ್ಯದ ಜನರು ಶೇಕಡಾ 40 ಕಮಿಷನ್‌ನಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಯುತ್ತಿದ್ದು, ಬೆಂಗಳೂರಿನ ಕಳಪೆ ಮೂಲಸೌಕರ್ಯಗಳ ಕಾರಣ ಮುಜುಗರಕ್ಕೆ ಕಾರಣವಾಗುತ್ತಿದೆ ಎಂದವರು ಹೇಳಿದ್ದಾರೆ.

’ದುರದೃಷ್ಟವಶಾತ್, ನಾಲ್ಕು ವರ್ಷಗಳಿಂದ ಕೆಟ್ಟ ಆಡಳಿತವನ್ನು ನಾವು ನೋಡಿದ್ದೇವೆ. ಜನರ ಬೇಡಿಕೆಗಳನ್ನು ಈಡೇರಿಸಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ’ ಎಂದವರು ಹೇಳಿದರು.

ಹೆಚ್ಚಿನ ಸುದ್ದಿ