ಬೆಳಗಾವಿಯ ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಲಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸವದಿಗೆ ಟಿಕೆಟ್ ನೀಡಲ್ಲ ಎಂಬ ಸುಳಿವು ಪರೋಕ್ಷವಾಗಿ ನೀಡಿದ್ದಾರೆ.
ಲಕ್ಷ್ಮಣ ಸವದಿ ಅಥಣಿ ಟಿಕೆಟ್ ಬೇಕೆಂದು ಅವರು ಕೇಳುತ್ತಿದ್ದಾರೆ. ಆದರೆ ಮಹೇಶ ಕುಮಟಳ್ಳಿ ಅವರು ನಮ್ಮ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದವರು. ನಮಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಲಕ್ಷ್ಮಣ ಸವದಿಯವರಿಗೆ ಮನದಟ್ಟು ಮಾಡಿದ್ದೇನೆ. ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೆಎಸ್ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಶ್ವರಪ್ಪ ಅವರ ಅನುಭವ ನಮಗೆಲ್ಲಾ ಬೇಕಿದೆ, ಹಾಗಾಗಿ, ಅವರು ರಾಜಕಾರಣದಲ್ಲಿ ಮುಂದುವರೆಯಬೇಕೆಂದು ಒತ್ತಾಯ ಮಾಡುತ್ತಿದ್ದೇನೆ. ಚುನಾವಣೆ ನಿಲ್ಲೋದು ಬಿಡೋದು ರಾಷ್ಟ್ರೀಯ ಮುಖಂಡು ತೀರ್ಮಾನಿಸುತ್ತಾರೆ. ಆದರೆ, ಕಾಂಗ್ರೆಸ್ ನಲ್ಲಿ 93 ವರ್ಷದವರಿಗೂ ಮಣೆ ಹಾಕಲಾಗುತ್ತದೆ. ನಮ್ಮ ಪಕ್ಷಕ್ಕೂ ಇತರ ಪಕ್ಷಗಳಿಗೂ ಇರೋ ವ್ಯತ್ಯಾಸ ಇದು ಎಂದು ಬೊಮ್ಮಾಯಿ ಹೇಳಿದ್ದಾರೆ.