Saturday, June 27, 2026
Homeಚುನಾವಣೆ 2023ಕೈ ತಪ್ಪಿದ ಟಿಕೆಟ್:‌ ಆರ್‌ ಶಂಕರ್ ರಾಜಿನಾಮೆಗೆ ಸಜ್ಜು

ಕೈ ತಪ್ಪಿದ ಟಿಕೆಟ್:‌ ಆರ್‌ ಶಂಕರ್ ರಾಜಿನಾಮೆಗೆ ಸಜ್ಜು

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್.ಶಂಕರ್ ತಮ್ಮ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಇಂದು ಸಭಾಪತಿ ಬಸವರಾಜ್ ಹೊರಟ್ಟಿಯನ್ನು ಸಂಪರ್ಕಿಸಿ ರಾಜೀನಾಮೆ ನೀಡುವುದಾಗಿ ಆರ್.ಶಂಕರ್ ಮಾಹಿತಿ ನೀಡಿದ್ದಾರೆ.

ರಾಣೇಬೆನ್ನೂರು  ಆರ್‌ ಶಂಕರ್‌ ಟಿಕೆಟ್‌ ನಿರೀಕ್ಷಿಸಿದ್ದರು.ಆದರೆ, ಶಾಸಕ ಅರುಣ್ ಕುಮಾರ್​ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಆರ್.ಶಂಕರ್ ಅಸಮಾಧಾನಗೊಂಡಿದ್ದಾರೆ.   

ಬಿಜೆಪಿಯನ್ನು ಅಧಿಕಾರಕ್ಕೆ ತಂದೋರು ನಾವು, ನಮಗೆಲ್ಲ ಮೋಸ ಮಾಡಿದ್ರು ಎಂದು ಆರ್.ಶಂಕರ್ ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಆರ್.ಶಂಕರ್ ಸರ್ಕಾರ ಉರುಳಲು ಪ್ರಮುಖ ಪಾತ್ರ ವಹಿಸಿದ್ದರು.

ಹೆಚ್ಚಿನ ಸುದ್ದಿ