Saturday, June 27, 2026
Homeಚುನಾವಣೆ 2023ಬಿಜೆಪಿ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಭಾಸ್ಕರ್ ರಾವ್ ಘೋಷಣೆ!

ಬಿಜೆಪಿ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಭಾಸ್ಕರ್ ರಾವ್ ಘೋಷಣೆ!

ಬೆಂಗಳೂರು: ಮಂಗಳವಾರ ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಚಾಮರಾಜಪೇಟೆ ಕ್ಷೇತ್ರಕ್ಕೆ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ಒಲಿದು ಬಂದಿತ್ತು. ಇದನ್ನು ಖಂಡಿಸಿ ಸ್ಥಳೀಯ ಮುಖಂಡರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಜಪೇಟೆ ಕ್ಷೇತ್ರದಿಂದ ಸುನೀಲ್ ವೆಂಕಟೇಶ್ ಬಿಜೆಪಿಯಿಂದ ಟಿಕೆಟ್ ಪಡೆದು ಕಣಕ್ಕಿಳಿಯುವ ಇಚ್ಛೆ ಹೊಂದಿದ್ದರು. ಆದರೆ ಅವರ ಕೈ ತಪ್ಪಿದ ಟಿಕೆಟ್ ಭಾಸ್ಕರ್ ರಾವ್ ಅವರಿಗೆ ಸಿಕ್ಕೆದೆ. ಇದನ್ನು ಖಂಡಿಸಿದ ಬಿಜೆಪಿ ಕಾರ್ಯಕರ್ತರು, ಎಎಪಿ ತೊರೆದು ಬಿಜೆಪಿ ತೊರೆದ ಭಾಸ್ಕರ್ ರಾವ್ ವಿರುದ್ಧ ಗೋ ಬ್ಯಾಕ್ ಭಾಸ್ಕರ್ ರಾವ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿರುವ ಭಾಸ್ಕರ್ ರಾವ್, ಕಳೆದ ಮೂವತ್ತು ವರ್ಷದಿಂದ ಚಾಮರಾಜಪೇಟೆಯಲ್ಲಿ ಬಿಜೆಪಿ ಗೆದ್ದಿಲ್ಲ. ಆದರೆ ಈ ಬಾರಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ