ಕನ್ನಡದ ಖ್ಯಾತ ನಿರ್ದೆಶಕ ಪ್ರೇಮ್ ನಿರ್ದೆಶನದ ಕೆಡಿ ಸಿನಿಮಾ ಚಿತ್ರೀಕರಣದ ವೇಳೆ ಬಾಲಿವುಡ್‌ನಾ ದಾದಾ ಸಂಜಯ್ ದತ್ ಅವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಫೈಟಿಂಗ್ ಸೀನ್ ಚಿತ್ರೀಕರಣದ ವೇಳೆ ಬಾಂಬ್ ಬ್ಲಾಸ್ಟಿಂಗ್ ಆಗಿದ್ದು ಸಂಜಯ್ ದತ್‌ಗೆ ಗಾಯವಾಗಿದೆ.
ಸದ್ಯ ಕೆಡಿ ಸಿನಿಮಾದ ಚಿತ್ರಣ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆಯುತ್ತಿದ್ದು, ಬಾಂಬ್ ಬ್ಲಾಸ್ಟ್‌ನಿಂದ ದಾದಾ ಮುಖಕ್ಕೆ ಮತ್ತು ಮೊಣಕೈಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಅವಘಡದಿಂದ ಸಿನಿಮಾ ಚಿತ್ರೀಕರಣವನ್ನ ನಿಲ್ಲಿಸಲಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೆಶಕ ಪ್ರೇಮ್ ಕಾಂಬಿನೇಷನ್‌ನಲ್ಲಿ ಇದೇ ಮೊದಲ ಸಿನಿಮಾವಾಗಿದೆ. ಅಲ್ಲದೇ ಈ ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದು, ಮತ್ತೊಮ್ಮೆ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.