Saturday, April 18, 2026
Homeಚುನಾವಣೆ 2023120 ಸ್ಥಾನ ಗೆಲ್ಲಲೇ ಬೇಕು, ಗೆಲುವಿಗಾಗಿ ನನ್ನ ಹೋರಾಟ: ಹೆಚ್‌ಡಿಕೆ

120 ಸ್ಥಾನ ಗೆಲ್ಲಲೇ ಬೇಕು, ಗೆಲುವಿಗಾಗಿ ನನ್ನ ಹೋರಾಟ: ಹೆಚ್‌ಡಿಕೆ

ಬೆಂಗಳೂರು: ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್, ಡಿ, ಕುಮಾರಸ್ವಾಮಿ, ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲೇಬೇಕು. ಗೆಲುವಿಗಾಗಿ ನನ್ನ ಹೋರಾಟ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲೇಬೇಕು. ಅದಕ್ಕಾಗಿಯೇ ನನ್ನ ಹೋರಾಟ. ಗೆಲುವಿಗಾ ಏನು ಮಾಡಬೇಕೊ ಎಲ್ಲವನ್ನೂ ಮಾಡುವೆ. ಇದು ನನ್ನ ಜೀವನದ ಸವಾಲಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ವರದಿ ಪ್ರಕಾರ, ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ಬಡತನವಿದೆ. ಅಭಿವೃದ್ಧಿಯ ಕೊರತೆಯಿಂದ ಉತ್ತರ ಕರ್ನಾಟಕಕ್ಕೆ ಶಾಪ ತಂಟ್ಟಿದಂತಾಗಿದೆ. ಈ ಭಾಗದ ಅಭಿವೃದ್ಧಿಗಾಗಿ 120 ಸ್ಥಾನಗಳನ್ನ ನಾನು ಗೆಲ್ಲಲೇಬೇಕು. ಅದಕ್ಕಾಗಿ ನಾನು ಹೋರಾಡುವೆ. ಪಂಚರತ್ನ ಕಾರ್ಯಕ್ರಮ ಉತ್ತರ ಕರ್ನಾಟಕದ ಪ್ರತಿ ಹಳ್ಳಿಹಳ್ಳಿಗೂ ತಲುಪಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ