Saturday, June 27, 2026
Homeಚುನಾವಣೆ 2023ಇವತ್ತು ನಾನು ವಿಲನ್‌ ಆಗಿದ್ದೇನೆ: ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ತಿರುಗೇಟು

ಇವತ್ತು ನಾನು ವಿಲನ್‌ ಆಗಿದ್ದೇನೆ: ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ತಿರುಗೇಟು

  ತಮಗೆ ಟಿಕೆಟ್ ​ಕೈ ತಪ್ಪಲು ಸಿ.ಟಿ ರವಿ ಅವರೇ ನೇರ ಕಾರಣ ಎಂಬ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿಟಿ ರವಿ ತಿರುಗೇಟು ನೀಡಿದ್ದಾರೆ.  

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿವವನು ನಾನೊಬ್ಬನೇ, ಹಾಗಾಗಿ ಏನೇ ಆದರೂ ನಾನೇ ಕಾರಣ ಎಂದು ಭಾವಿಸುತ್ತಾರೆ. ಇಷ್ಟು ದಿನ ಕುಮಾರಸ್ವಾಮಿಗೆ ನಾಯಕನಾಗಿದ್ದೆ, ಇವತ್ತು ವಿಲನ್ ಆಗಿದ್ದೇನೆ. ನಾಳೆ ಮತ್ತೆ ನಾಯಕ ಅಂತ ಒಪ್ಪಿಕೊಳ್ಳುತ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಪಕ್ಷ ಎಂ.ಪಿ ಕುಮಾರಸ್ವಾಮಿ ಹಾಗೂ ಸೊಗಡು ಶಿವಣ್ಣರನ್ನು ಬೆಳೆಸಿದೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸಮಾಧಾನ ಮಾಡುವ ಕೆಲಸ ಪಕ್ಷ ಮಾಡುತ್ತೆ. ಬಿಜೆಪಿಯಿಂದ ಅನುಕೂಲವನ್ನು ಕೂಡ ಅವರು ಪಡೆದಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಸೈದಾಂತಿಕ ಬದ್ಧತೆ ಇರುವರು ನಮ್ಮ ಜೊತೆ ಇರುತ್ತಾರೆ ಎಂದು ಸಿಟಿ ರವಿ ಹೇಳಿದರು.

ಎಂ.ಪಿ ಕುಮಾರಸ್ವಾಮಿ, ಸೊಗಡು ಶಿವಣ್ಣ ಸೇರಿದಂತೆ ಎಲ್ಲರೂ ವ್ಯಕ್ತಿಗತವಾಗಿ ನಮ್ಮ ಜೊತೆ ಆತ್ಮೀಯವಾಗಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ. ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರೂ ಸಿ.ಟಿ.ರವಿಯನ್ನು ನೆಚ್ಚಿಕೊಂಡಿಲ್ಲ, ಬಿಜೆಪಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ. ಕುಮಾರಸ್ವಾಮಿ, ಜೀವರಾಜ್, ನನ್ನನ್ನು ಸೈದ್ಧಾಂತಿಕ ಬದ್ಧತೆ ಕಾರಣಕ್ಕೆ ಗೆಲ್ಲಿಸಿದರು. ಮೂಡಿಗೆರೆಯಲ್ಲಿ ಬಿಜೆಪಿ ಬಲವಾಗಿದೆ ಗೆಲ್ಲಿಸುತ್ತೇವೆ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ನಿನ್ನೆ ನನ್ನ ಮನೆಗೆ ಬಂದು ಹೊಗಳಿ ಹೋಗಿದ್ದರು. ಈಗ ಹೀಗೆ ಮಾತನಾಡ್ತಾರೆ. ನಾಳೆ ಏನ್ ಮಾತನಾಡ್ತಾರೆ ನೋಡೋಣ ಎಂದು ಸಿಟಿ ರವಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ