ಮೆಕ್ಸಿಕೋ: ಮೆಕ್ಸಿಕೋದ ಕೆಲವು ಭಾಗಗಳಲ್ಲಿ, ಭದ್ರತಾ ಸಿಬ್ಬಂದಿ ಮತ್ತು ಡ್ರಗ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹಾಗೆಯೇ ಡ್ರಗ್ ಕಳ್ಳ ಸಾಗಣೆದಾರರಿಂದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುತ್ತಾರೆ. ಆದ್ರೆ ಈ ಬಾರಿ ಆಗಿದ್ದೆ ಬೇರೆ. ಕಳ್ಳ ಸಾಗಣೆದಾರರು ಬಿಟ್ಟು ಹೋಗಿದ್ದ ಟ್ರಕ್ ನಲ್ಲಿ ಡ್ರಗ್ ಬದಲಾಗಿ ಹುಲಿ ಪತ್ತೆಯಾಗಿದೆ.
ಕಳೆದ ಸೋಮವಾರ ಉತ್ತರ ಮೆಕ್ಸಿಕೋದ ಸಿನಾಲೋವಾದಲ್ಲಿ ಮೆಕ್ಸಿಕನ್ ಮಾದಕದ್ರವ್ಯ ವಿರೋಧಿ ಘಟಕದ ಅಧಿಕಾರಿಗಳು ಡ್ರಗ್ ಕಳ್ಳ ಸಾಗಣೆದಾರರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಸಾಗಣೆದಾರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಟ್ರಕ್ ಹಾಗೂ ಇನ್ನುಳಿದ ವಾಹನಗಳನ್ನು ಸ್ಥಳದಲಿಯೇ ಬಿಟ್ಟು ಕಳ್ಳ ಸಾಗಣೆದಾರರು ಪರಾರಿಯಾಗಿದ್ದರು. ಅವರು ಬಿಟ್ಟು ಹೋಗಿದ್ದ ವಾಹನದಲ್ಲಿ ಅಧಿಕಾರಿಗಳಿಗೆ ಪತ್ತೆಯಾಗಿದ್ದು ಟ್ರಕ್ ಹಿಂಬದಿಯಲ್ಲಿದ್ದ ಬೃಹತ್ ಗಾತ್ರದ ಹುಲಿ.
ಅದೃಷ್ಟವಶಾತ್ ಗುಂಡಿನ ಚಕಮಕಿಯಲ್ಲಿ ಹುಲಿಗೆ ಯಾವುದೆ ಗಾಯಗಳಾಗಿಲ್ಲ. ಸ್ಥಳದಿಂದ ಮೂರು ವಾಹನಗಳು ಮತ್ತು ಹುಲಿಯನ್ನು ಭದ್ರತಾ ಸಿಬ್ಬಂದಿ ವಾಶಪಡಿಸಿಕೊಂಡಿದ್ದಾರೆ. ಹುಲಿಯನ್ನು ಕುಲಿಯಾಕನ್ ಮೃಗಾಲಯಕ್ಕೆ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.