ಕೊಲಂಬೊ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಆದರೆ, ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ನಟ ಯಶ್ ಶೀಲಂಕಾಗೆ ತೆರಳಿದ್ದು, ಶ್ರೀಲಂಕಾ ಸರಕಾರವೇ ಈ ಮಾಹಿತಿ ಹಂಚಿಕೊಂಡಿದೆ.
ಈ ಕುರಿತು ಬೋರ್ಡ್ ಆಫ್ ಇನ್ ವೆಸ್ಟ್ ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೀರಕ್ಕೋಡಿ ಮಾಹಿತಿ ಹಂಚಿಕೊಂಡಿದ್ದು, ಭಾರತದ ಖ್ಯಾತ ನಟ ಯಶ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಎಲ್ಲ ಯಶ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ಯಶ್ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದಾರೆ. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ, ಬೇಸಿಗೆ ರಜೆಯನ್ನು ಕಳೆಯಲು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಹಲವು ದಿನಗಳಿಂದ ಯಶ್ ಮತ್ತು ತಂಡ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದೆ. ಅಲ್ಲಿನ ಸಿನಿಮಾ ಉದ್ಯಮಿಗಳನ್ನು ಮತ್ತು ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ. ಅಲ್ಲದೇ, ಚಿತ್ರೀಕರಣ ಸ್ಥಳವನ್ನೂ ಅವರು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.