Saturday, June 27, 2026
Homeಟಾಪ್ ನ್ಯೂಸ್ಸುಡುತ್ತಿದೆ ಭಾರತ: ಹಲವು ರಾಜ್ಯಗಳಿಗೆ ಬಿಸಿ ಗಾಳಿಯ ಎಚ್ಚರಿಕೆ

ಸುಡುತ್ತಿದೆ ಭಾರತ: ಹಲವು ರಾಜ್ಯಗಳಿಗೆ ಬಿಸಿ ಗಾಳಿಯ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಿಸಿ ಗಾಳಿಯ ಪರಿಣಾಮ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ 38-39 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಲಿದ್ದು, 2ರಿಂದ 3 ವಾರಗಳ ಕಾಲ ಈ ಪರಿಸ್ಥಿತಿ ಇರಲಿದೆ. ಬಿಸಿ ಗಾಳಿಯ ಪರಿಣಾಮವೂ ಇರಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಸದ್ಯಕ್ಕೀಗ ಮಧ್ಯ ಮತ್ತು ಉತ್ತರ ಭಾರತದಲ್ಲಿ ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ‌.

ಒಡಿಶಾದಲ್ಲಿ ಗುರುವಾರ ದಿನದ ತಾಪಮಾನ 43.5 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

ಕೇರಳದಲ್ಲೂ ತಾಪಮಾನ ಹೆಚ್ಚುತ್ತಿದ್ದು, ಹಲವೆಡೆ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. 42.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ತ್ರಿಶೂರ್‌ನ ವೆಲ್ಲನಿಕ್ಕಾರದಲ್ಲಿ ದಾಖಲಾಗಿದ್ದು, ಇದು ಈ ವರ್ಷದ ಅತಿ ಹೆಚ್ಚು ದಾಖಲಾದ ಅತ್ಯಧಿಕ ತಾಪಮಾನವಾಗಿದೆ‌.

ಹೆಚ್ಚಿನ ಸುದ್ದಿ