Monday, July 7, 2025
Homeಚುನಾವಣೆ 2023ನಾಳೆ ಕೋಲಾರದಲ್ಲಿ ರಾಹುಲ್ ಗಾಂಧಿ 'ಜೈಭಾರತ್' ಸಮಾವೇಶ!

ನಾಳೆ ಕೋಲಾರದಲ್ಲಿ ರಾಹುಲ್ ಗಾಂಧಿ ‘ಜೈಭಾರತ್’ ಸಮಾವೇಶ!

ಕೋಲಾರ‌: ನಾಳೆ ಕೋಲಾರದಲ್ಲಿ ರಾಹುಲ್ ಗಾಂಧಿಯ ಜೈ ಭಾರತ್ ಸಮಾವೇಶ ನಡೆಯಲಿದೆ. ಕೋಲಾರ ನಗರದ ಹೊರವಲಯ ಟಮಕಾ ಬಡಾವಣೆಯಲ್ಲಿ ವೇದಿಕೆ ಹಾಗೂ ಪೆಂಡಾಲ್ ನಿರ್ಮಾಣ ಮಾಡಲಾಗಿದ್ದು, ಜೈಭಾರತ್ ಹೆಸರಿನ ಬೃಹತ್ ಸಮಾವೇಶದ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆ ಇಂದು ಕೋಲಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸತ್ಯಮೇವ ಜಯತೆ ಘೋಷವಾಕ್ಯದೊಂದಿಗೆ ರಾಹುಲ್‌ ಗಾಂಧಿ ಭಾಷಣ ಮಾಡಲಿದ್ದು. 2019 ರಲ್ಲಿ ಮೋದಿ ಪದನಾಮದ ಕುರಿತು ಮಾಡಿದ್ದ ಭಾಷಣದಿಂದ ಸೂರತ್‌ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಬೇಕಾಗಿ ಬಂದು ರಾಹುಲ್ ಗಾಂಧಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು.

ಕೋಲಾರದಲ್ಲಿ ಮಾಡಿದ ಭಾಷಣದಿಂದ ಸಂಸದ ಸ್ಥಾನ ಕಳೆದುಕೊಂಡ ರಾಹುಲ್‌ ಗಾಂಧಿ ನ್ಯಾಯ ಕೇಳಲು ಮತ್ತೆ ಕೋಲಾರದಿಂದಲೇ ಪ್ರತಿಭಟನಾ ಸಮಾವೇಶ ಪ್ರಾರಂಭಿಸೋದಾಗಿ ಹೇಳಿದ್ರು. ಏಪ್ರಿಲ್ 5ಕ್ಕೆ ನಡೆಯಬೇಕಿದ್ದ ಸಮಾವೇಶ ಕಾರಣಾಂತರದಿಂದ ಮುಂದೂಡಿಕೆಯಾಗಿ ಏಪ್ರಿಲ್ 16ಕ್ಕೆ ಸಮಾವೇಶ ನಡೆಯುತ್ತಿದೆ.

12 ಎಕರೆ ಜಾಗದಲ್ಲಿ ಕಾರ್ಯಕ್ರಮ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, 2ಲಕ್ಷ ಚದರ ಅಗಲವಾದ ಟಡಂಟ್ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಜನ ಭಾಗವಹಿಸುತ್ತಿದ್ದಾರೆ.

ನಾಳೆ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಅಡ್ಡಗಲ್ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ರಾಹುಲ್ ಗಾಂಧಿ ಆಗಮಿಸಲಿದ್ದು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

ಹೆಚ್ಚಿನ ಸುದ್ದಿ