ಪಂಜಾಬ್: ಇತ್ತೀಚೆಗೆ ಪಂಜಾಬ್ ನ ಭಟಿಂಡಾದಲ್ಲಿ ಸೇನಾ ನೆಲೆಯಲ್ಲಿ ನಾಲ್ವರು ಯೋಧರ ಸಾವಿಗೆ ಕಾರಣವಾದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಆರೋಪಿ ಮೋಹನ್ ದೇಸಾಯಿಯನ್ನು ತಾನು ಈ ಕೃತ್ಯ ಎಸಗಿದ್ದೇನೆ. ವೈಯಕ್ತಿಕ ದ್ವೇಷವೇ ಇದಕ್ಕೆ ಕಾರಣ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,
‘‘ಶಸ್ತ್ರಗಾರದಿಂದ ಬಂದೂಕನ್ನು ಕದ್ದು ಈ ಕೃತ್ಯ ನಡೆಸಲಾಗಿದೆ ಎನ್ನುವುದು ಆರಂಭದಲ್ಲೇ ನಮ್ಮ ಗಮನಕ್ಕೆ ಬಂದಿತ್ತು. ನಂತರ ಯೋಧನೊಬ್ಬನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ INSAS ರೈಫಲ್ ಕದ್ದದ್ದನ್ನು ಮತ್ತು ನಾಲ್ವರು ಸಹೋದ್ಯೋಗಿಗಳನ್ನು ಕೊಂದದ್ದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಭಟಿಂಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಖುರಾನಾ ಹೇಳಿದ್ದಾರೆ.