Monday, July 7, 2025
Homeದೇಶಮುಸ್ಲಿಂ ಮೀಸಲಾತಿ ರದ್ದು: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಮುಸ್ಲಿಂ ಮೀಸಲಾತಿ ರದ್ದು: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ರಾಜ್ಯದಲ್ಲಿ ಮುಸ್ಲಿಮರಿಗೆ 2ಬಿ ವಿಭಾಗದಲ್ಲಿದ್ದ ಮೀಸಲಾತಿ ರದ್ದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ. ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೇಳಿದೆ.

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮುಸ್ಲಿಮರಿಗಿದ್ದ 4 ಶೇಕಡಾ ಮೀಸಲಾತಿ ತೆಗೆದುಹಾಕಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ನೀಡಲಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

ಈಗಾಗಲೇ ವಿಚಾರಣೆ ಆರಂಭಿಸಿರುವ ನ್ಯಾಯಪೀಠ ಮುಸ್ಲಿಮರ ಮೀಸಲಾತಿ ರದ್ದು ಮೇಲ್ನೋಟಕ್ಕೆ ದೋಷಪೂರಿತ ಎಂಬಂತೆ ಕಂಡುಬರುತ್ತಿದೆ ಎಂದಿತ್ತು. ಇದೀಗ ವಿಚಾರಣೆಯನ್ನು ಎಪ್ರಿಲ್ 25ಕ್ಕೆ ಮುಂದೂಡಲಾಗಿದೆ‌.

ಹೆಚ್ಚಿನ ಸುದ್ದಿ