ಚೀನಾದ ಬೀಜಿಂಗ್‌ನಲ್ಲಿರುವ ಚಾಂಗ್‌ಫೆಂಗ್ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಸಜೀವ ದಹನವಾಗಿದ್ದು, ಅನೇಕರು ಜೀವ ಕಾಪಾಡಿಕೊಳ್ಳಲು ಕಿಟಕಿಗಳಿಂದ ಹಾರಿ ಗಂಭೀರ ಗಾಯಗೊಂಡಿದ್ದಾರೆ.
ಆಸ್ಪತ್ರೆಯ ಒಳರೋಗಿ ವಿಭಾಗದ ಪೂರ್ವ ವಿಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅಗ್ನಿಯ ಕೆನ್ನಾಲಗೆ ಆಸ್ಪತ್ರೆಯಾದ್ಯಂತ ವ್ಯಾಪಿಸಿತು. ಈ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿನಂದಿಸುವ ಕಾರ್ಯಾಚರಣೆಯಲ್ಲಿತೊಡಗಿದ್ದಾರೆ.ಘಟನೆಯಲ್ಲಿ ಈಗಾಗಲೇ ಒಟ್ಟು 71 ರೋಗಿಗಳನ್ನು ರಕ್ಷಿಸಲಾಗಿದೆ.ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.